ಬಂಟ್ವಾಳ, ಜೂನ್ 23, 2023 (ಕರಾವಳಿ ಟೈಮ್ಸ್) : ಅಕ್ಷರ ದಾಸೋಹ ನೌಕರರನ್ನು ರಾಜಕೀಯ ದುರುದ್ದೇಶದಿಂದ ಕಾನೂನು ಬಾಹಿರವಾಗಿ ಕೆಲಸದಿಂದ ವಜಾ ಮಾಡಿದ ಬಗ್ಗೆ ಎಐಸಿಸಿಟಿಯು ನಿಯೋಗ ರಾಜ್ಯದ ಗೃಹ ಸಚಿವರು, ಶಿಕ್ಷಣ ಸಚಿವರು ಹಾಗೂ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಲಿಖಿತ ದೂರು ನೀಡಿದೆ.
ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಉಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಅಡುಗೆ ಸಿಬ್ಬಂದಿಯಾಗಿ ಸರಕಾರದ ನಿಯಮಾನುಸಾರ ಆಯ್ಕೆಯಾಗಿ ಬಿಸಿಯೂಟ ನೌಕರರಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದ ಯಶೋಧ ಕೋಂ ಮಹಾಬಲ ಅವರನ್ನು ಮೇ31 ರಂದು ಮಧ್ಯಾಹ್ನ ಉಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಕೆಲಸದಿಂದ ವಜಾ ಮಾಡಬೇಕೆಂದು ತಿಳಿಸಿದ ಹಿನ್ನಲೆಯಲ್ಲಿ ಶಾಲಾ ಮುಖ್ಯೋಪಾಧ್ಯಯರು ಅನ್ಯಾಯವಾಗಿ ಕೆಲಸಿದಂದ ವಜಾ ಮಾಡಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದರೂ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಅಲ್ಲದೇ ಸರಕಾರದ ನಿಯಮವನ್ನು ಪಾಲಿಸದೆ ಏಕಾಏಕಿ ಶಾಲೆಯ ಬಿಸಿಯೂಟ ಕೆಲಸದಿಂದ ಕಾನೂನು ಬಾಹಿರವಾಗಿ ವಜಾ ಮಾಡಿರುತ್ತಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಬಿಸಿಯೂಟ ನೌಕರರಾದ ಯಶೋಧ ಅವರಿಗೆ ನ್ಯಾಯ ಒದಗಿಸಿಕೊಡುವಂತೆ ಎಐಸಿಸಿಟಿಯು ಬಂಟ್ವಾಳ ತಾಲೂಕು ತಹಶೀಲ್ದಾರರ ಮುಖಾಂತರ ರಾಜ್ಯದ ಗೃಹ ಮಂತ್ರಿ ಡಾ ಜಿ ಪರಮೇಶ್ವರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಜಿ ಪಂ ಮುಖ್ಯ ಕಾರ್ಯ£ರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ನಿಯೋಗದಲ್ಲಿ ಎಐಸಿಸಿಟಿಯು ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ, ಅಕ್ಷರ ದಾಸೋಹ ನೌಕರರಾದ ಯಶೋಧ, ಕಾರ್ಮಿಕ ಮುಖಂಡರಾದ ಇಬ್ರಾಹಿಂ ಮೈಂದಾಳ, ಬಿ ಟಿ ಕುಮಾರ್ ಇದ್ದರು.
0 comments:
Post a Comment