ಬಂಟ್ವಾಳ, ಜೂನ್ 09, 2023 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಬಿ ಮೂಡ ಗ್ರಾಮದ ತಲಪಾಡಿ ಬಳಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿ ಗಾಯಗೊಂಡ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಬುಧವಾರ ರಾತ್ರಿ ಸುಮಾರು 9.30 ರ ವೇಳೆಗೆ ಬಿ ಮೂಡ ಗ್ರಾಮದ ಮೊಡಂಕಾಪ ಸಮೀಪದ ಕೋಡಿಬೆಟ್ಟು ನಿವಾಸಿ ಬಾಬು ಶೆಟ್ಟಿ ಎಂಬವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಬಿ ಸಿ ರೋಡು ಕಡೆಯಿಂದ ಧಾವಿಸಿ ಬಂದ ದ್ವಿಚಕ್ರ ವಾಹನದ ಸವಾರ ಪ್ರಭಾಕರ ಆಚಾರ್ಯ ಎಂಬಾತ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಘಟನೆಯಿಂದ ಬಾಬು ಶೆಟ್ಟಿ ಅವರ ತಲೆಗೆ, ಕೈ-ಕಾಲುಗಳಿಗೆ ಗಾಯವಾಗಿದ್ದು, ಅವರನ್ನು ತುಂಬೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಗಾಯಾಳು ಬಾಬು ಶೆಟ್ಟಿ ಅವರ ಪುತ್ರ ಮಹೇಶ್ ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment