ಮೂಡಿಗೆರೆ ಸಮೀಪದ ದೇವರಮನೆ ಗುಡ್ಡದಲ್ಲಿ ಯುವಕನ ಕೊಳೆತಮೃತದೇಹ ಪತ್ತೆ : ಬಂಟ್ವಾಳ ಮೂಲದ ಯುವಕ ಗಾಂಜಾ ಪ್ರಕರಣದಲ್ಲಿ ಕೊಲೆಯಾಗಿರುವ ಶಂಕೆ, ಪೊಲೀಸರಿಂದ ತನಿಖೆ ತೀವ್ರ - Karavali Times ಮೂಡಿಗೆರೆ ಸಮೀಪದ ದೇವರಮನೆ ಗುಡ್ಡದಲ್ಲಿ ಯುವಕನ ಕೊಳೆತಮೃತದೇಹ ಪತ್ತೆ : ಬಂಟ್ವಾಳ ಮೂಲದ ಯುವಕ ಗಾಂಜಾ ಪ್ರಕರಣದಲ್ಲಿ ಕೊಲೆಯಾಗಿರುವ ಶಂಕೆ, ಪೊಲೀಸರಿಂದ ತನಿಖೆ ತೀವ್ರ - Karavali Times

728x90

9 June 2023

ಮೂಡಿಗೆರೆ ಸಮೀಪದ ದೇವರಮನೆ ಗುಡ್ಡದಲ್ಲಿ ಯುವಕನ ಕೊಳೆತಮೃತದೇಹ ಪತ್ತೆ : ಬಂಟ್ವಾಳ ಮೂಲದ ಯುವಕ ಗಾಂಜಾ ಪ್ರಕರಣದಲ್ಲಿ ಕೊಲೆಯಾಗಿರುವ ಶಂಕೆ, ಪೊಲೀಸರಿಂದ ತನಿಖೆ ತೀವ್ರ

ಬಂಟ್ವಾಳ, ಜೂನ್ 09, 2023 (ಕರಾವಳಿ ಟೈಮ್ಸ್) : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಸಿದ್ಧ  ಪ್ರವಾಸಿ ತಾಣವಾಗಿರುವ ದೇವರಮನೆ ಗುಡ್ಡದಲ್ಲಿ ಯುವಕನೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಬಂಟ್ವಾಳ ತಾಲೂಕು ಇರಾ ಗ್ರಾಮದ ಕಾಪಿಕಾಡ್ ನಿವಾಸಿ ಯುವಕನ ಮೃತದೇಹ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರುಮನೆಯಲ್ಲಿ ಈ ಘಟನೆ ನಡೆದಿದ್ದು, ದೇವರು ಮನೆ ಗುಡ್ಡದ ರಸ್ತೆ ತಿರುವಿನಲ್ಲಿ ಮೃತದೇಹ ಪತ್ತೆಯಾಗಿದೆ. ಇರಾ ಗ್ರಾಮದ ಕಾಪಿಕಾಡು ನಿವಾಸಿ ದಿವಂಗತ ಅಬ್ಬಾಸ್ ಎಂಬವರ ಪುತ್ರ ಸವಾದ್ (35) ಎಂಬಾತನ ಮೃತದೇಹ ಇದಾಗಿದೆಯೆಂದು ಶಂಕಿಸಲಾಗಿದೆ. 

ಇಲ್ಲಿನ ಪ್ರವಾಸಿಗರು ಮೃತದೇಹವನ್ನು ನೋಡಿ ಪೆÇಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಬಣಕಲ್ ಪೆÇಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸವಾದ್ ಕುಟುಂಬಸ್ಥರು ಹಾಗೂ ಊರವರು ಸ್ಥಳಕ್ಕೆ ತೆರಳಿದ್ದು, ಸವಾದ್‍ನದ್ದೇ ಮೃತದೇಹ ಎಂದು ಗುರುತಿಸಿದ್ದಾರೆ ಎನ್ನಲಾಗಿದೆ.

ಇದೊಂದು ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದ ಯೋಜಿತ ಕೊಲೆ ಎಂಬ ಶಂಕೆ ವ್ಯಕ್ತವಾಗಿದ್ದು, ಕೊಲೆ ಆರೋಪಿಗಳ ಬಗ್ಗೆಯೂ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಮೃತ ಸವಾದ್ ಗಾಂಜಾ ವ್ಯಸನಿಯಾಗಿದ್ದನಲ್ಲದೆ ಗಾಂಜಾ ಮತ್ತಿತರ ಅಮಲು ಪದಾರ್ಥಗಳ ವ್ಯವಹಾರದಲ್ಲಿ ಒಂದು ಗುಂಪಿನೊಂದಿಗೆ ಗುರುತಿಸಿಕೊಂಡಿದ್ದಾನೆ ಎನ್ನಲಾಗಿದೆ. ಗಾಂಜಾ ವ್ಯವಹಾರದ ಕಾರಣಕ್ಕಾಗಿ ತಂಡದ ಯುವಕರ ಮಧ್ಯೆ ಯಾವುದೋ ಮನಸ್ತಾಪ ಉಂಟಾಗಿ ಈತನನ್ನು ಎಲ್ಲಿಯೋ ಕೊಲೆ ನಡೆಸಿ ಬಳಿಕ ಮೃತದೇಹದ ಮುಖಕ್ಕೆ ವಿದ್ಯುತ್ ಶಾಕ್ ನಂತಹ ಕೃತ್ಯ ನಡೆಸಿ ದೇವರಗುಡ್ಡದಲ್ಲಿ ಕೊಂಡು ಹೋಗಿ ಎಸೆದಿರುವ ಸಾಧ್ಯತೆ ಬಗ್ಗೆ ಶಂಕಿಸಲಾಗಿದೆ. 

ಮೃತ ಸವಾದ್ ಪುದು ಗ್ರಾಮದ ಯುವತಿಯನ್ನು ವಿವಾಹವಾಗಿದ್ದು, ಒಂದು ಮಗುವಿದೆ ಎನ್ನಲಾಗಿದ್ದು, ಈತನ ಗಾಂಜಾ ವ್ಯಸನದಿಂದಾಗಿಯೇ ಪತ್ನಿಯೂ ದೂರವಾಗಿದ್ದಳು ಎಂದು ತಿಳಿದು ಬಂದಿದೆ. 

ಬಂಟ್ವಾಳ ತಾಲೂಕಿನ ವಿವಿಧೆಡೆ ಯುವಕರು ತಂಡ ಕಟ್ಟಿಕೊಂಡು ಗಾಂಜಾ ಮತ್ತಿತರ ಅಮಲು ಪದಾರ್ಥ ಸೇವನೆ, ಸರಬರಾಜು ಮೊದಲಾದ ವ್ಯವಹಾರ ನಡೆಸುವ ಮಾಫಿಯಾ ಭಾರೀ ಜೋರಾಗಿದ್ದು, ಪೊಲೀಸರಿಗೆ ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡದರೂ ಕಠಿಣ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಮಧ್ಯ ವಯಸ್ಸಿನ ಯುವಕರು ಈ ರೀತಿಯಾಗಿ ದುರಂತ ಅಂತ್ಯವನ್ನು ಕಾಣುತ್ತಿದ್ದಾರೆ ಎನ್ನುವ ಸಾರ್ವಜನಿಕರು ಕೆಲ ತಿಂಗಳ ಹಿಂದೆಯಷ್ಟೆ ಇರಾ ಗ್ರಾಮದ ಗುಡ್ಡದಲ್ಲಿ ಸುರಿಬೈಲು ನಿವಾಸಿ ಯುವಕನೋರ್ವನನ್ನು ಅಟೋ ರಿಕ್ಷಾ ಚಾಲಕನೋರ್ವ ಬೆಂಕಿ ಹಾಕಿ ಸುಟ್ಟು ಹಾಕಿದ ಘಟನೆಯೂ ಇದೇ ಗಾಂಜಾ ಮಾಫಿಯಾ ಹಿನ್ನಲೆ ಇರುವ ಕೃತ್ಯವಾಗಿದೆ ಎನ್ನುತ್ತಾರೆ. ತಾಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಡ್ರಗ್ಸ್ ದಂಧೆ ವಿರುದ್ದ ಪೊಲೀಸರು ಹಾಗೂ ಆಡಳಿತ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಇನ್ನಷ್ಟು ಜೀವಗಳು ಇದೇ ರೀತಿ ಬಲಿಯಾಗುವ ದಿನ ದೂರವಿಲ್ಲ ಎಂದು ಸ್ಥಳೀಯ ಜನ ಆತಂಕ ವ್ಯಕ್ತಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮೂಡಿಗೆರೆ ಸಮೀಪದ ದೇವರಮನೆ ಗುಡ್ಡದಲ್ಲಿ ಯುವಕನ ಕೊಳೆತಮೃತದೇಹ ಪತ್ತೆ : ಬಂಟ್ವಾಳ ಮೂಲದ ಯುವಕ ಗಾಂಜಾ ಪ್ರಕರಣದಲ್ಲಿ ಕೊಲೆಯಾಗಿರುವ ಶಂಕೆ, ಪೊಲೀಸರಿಂದ ತನಿಖೆ ತೀವ್ರ Rating: 5 Reviewed By: karavali Times
Scroll to Top