ಬಂಟ್ವಾಳ, ಜೂನ್ 21, 2023 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಗೂಡಿಬಳಿ-ಬಂಟ್ವಾಳ ರಸ್ತೆಯ ಕಂಚಿಕಾರಪೇಟೆ ಕಿರು ಸೇತುವೆಯ ಅಡಿಭಾಗದ ನೇತ್ರಾವತಿ ನದಿಯಲ್ಲಿ ಬುಧವಾರ ಅಪರಿಚಿತ ಮಧ್ಯ ವಯಸ್ಕ ಮಹಿಳೆಯ ಮೃತದೇಹ ಪತ್ತೆಯಾಗಿದೆ. ನದಿಯಲ್ಲಿ ಮೃತದೇಹ ತೇಲಾಡುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಸ್ಥಳೀಯ ಗೂಡಿನಬಳಿ ಈಜುಪಟು ಯುವಕರಾದ ಮುಹಮ್ಮದ್ ಮಮ್ಮು, ಇರ್ಶಾದ್ ಡ್ರೀಮ್ಸ್ ಹಾಗೂ ಯಾಸಿರ್ ಗೂಡಿನಬಳಿ ಅವರ ನೇತತ್ವದ ತಂಡ ಮೃತದೇಹವನ್ನು ದೋಣಿಯ ಮೂಲಕ ಸಾಗಿ ಮೇಲಕ್ಕೆತ್ತಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸುವಲ್ಲಿ ನೆರವಾಗಿದ್ದಾರೆ. ಮೃತದೇಹದ ಗುರುತು-ಪರಿಚಯ ಲಭ್ಯವಾಗಿಲ್ಲ. ಉತ್ತರ ಭಾರತ ಮೂಲದ ಮಹಿಳೆ ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
0 comments:
Post a Comment