ಸಿಇಟಿ ಫಲಿತಾಂಶ ಪ್ರಕಟ : ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ನಟರಾಜ್ ಕುಮಾರಗೆ ಪ್ರಥಮ ರ್ಯಾಂಕ್ - Karavali Times ಸಿಇಟಿ ಫಲಿತಾಂಶ ಪ್ರಕಟ : ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ನಟರಾಜ್ ಕುಮಾರಗೆ ಪ್ರಥಮ ರ್ಯಾಂಕ್ - Karavali Times

728x90

15 June 2023

ಸಿಇಟಿ ಫಲಿತಾಂಶ ಪ್ರಕಟ : ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ನಟರಾಜ್ ಕುಮಾರಗೆ ಪ್ರಥಮ ರ್ಯಾಂಕ್

ಬೆಂಗಳೂರು, ಜೂನ್ 15, 2023 (ಕರಾವಳಿ ಟೈಮ್ಸ್) : ಪಿಯುಸಿ ನಂತರದ ವೃತ್ತಿಪರ ಕೋರ್ಸ್‍ಗಳಾದ ಇಂಜಿನಿಯರಿಂಗ್, ಆಯುರ್ವೇದ, ಹೋಮಿಯೋಪತಿ ಮತ್ತು ಫಾರ್ಮಸಿ, ಬಿಎಸ್‍ಸಿ ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಫಲಿತಾಂಶ ಗುರುವಾರ (ಜೂನ್ 15) ಪ್ರಕಟಗೊಂಡಿದೆ. 

ಮಲ್ಲೇಶ್ವರದ ಕೆಇಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್, ಈ ಬಾರಿ ರಾಜ್ಯದ 592 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. 592 ಕೇಂದ್ರಗಳಲ್ಲಿ 2,61,610 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸರಿ ಉತ್ತರಗಳನ್ನು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಲಿದೆ ಎಂದರು.

ಈ ಬಾರಿ ಸಿಇಟಿಯಲ್ಲೂ ಬಾಲಕಿಯರದ್ದೇ ಮೇಲುಗೈ. ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ನಟರಾಜು ಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಕ್ವಾಲಿಫೈ ಪರೀಕ್ಷೆಯಲ್ಲಿ 99.667 ಅಂಕ ಕಳಿಸಿದ್ದು, ಸಿಟಿಇಯಲ್ಲಿ 96.111 ಅಂಕ ಪಡೆದಿದ್ದು. ಒಟ್ಟು 97.111 ಪರ್ಸೆಂಟೇಜ್ ಪಡೆದಿದ್ದಾರೆ.

ಅರ್ಜುನ್ ಕೃಷ್ಣ ಸ್ವಾಮಿ ದ್ವಿತೀಯ ಸ್ಥಾನ, ಸಮೃದ್ಧ್ ಶೆಟ್ಟಿ ತೃತೀಯ ಸ್ಥಾನ, ಎಸ್ ಸುಮೇಧ್ 4ನೇ ಸ್ಥಾನ, ಮಾಧವ ಸೂರ್ಯಗೆ 5ನೇ ಸ್ಥಾನ ಲಭಿಸಿದೆ. 

ಇಂಜಿನಿಯರಿಂಗ್ ಕೋರ್ಸಿಗೆ 2,03,381, ಕೃಷಿ ವಿಜ್ಞಾನ ಕೋರ್ಸಿಗೆ 1,64,187, ಪಶುಸಂಗೋಪನೆ 166756, ಯೋಗ ಮತ್ತು ನ್ಯಾಚುರೋಪತಿಗೆ 2,06191, ಬಿ.ಫಾರ್ಮ್ ಮತ್ತು ಡಿ ಪಾರ್ಮ್ ಕೋರ್ಸ್‍ಗೆ 2,06,340, ನರ್ಸಿಂಗ್ ಕೋರ್ಸಿಗೆ 1,66,808 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ನ್ಯಾಚೂರೋಪತಿ ಹಾಗೂ ಯೋಗದಲ್ಲಿ ಪ್ರತೀಕ್ಷಾಗೆ ಮೊದಲ ರ್ಯಾಂಕ್ ಬಂದಿದೆ. ಪದ್ಮನಾಭನಗರದ ಕುಮಾರನ್ ಪಿಯು ಕಾಲೇಜಿನ ವಿದ್ಯಾರ್ಥಿನಿಯಾದ ಇವರು 98.661 ಅಂಕ ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. 

ಕೃಷಿ ವಿಭಾಗದಲ್ಲಿ ಬೈರೇಶ್ ಎಸ್.ಎಚ್ ಮೊದಲ ರ್ಯಾಂಕ್ ಪಡೆದಿದ್ದಾರೆ. ಮಂಗಳೂರಿನ ಎಕ್ಸ್‍ಪರ್ಟ್  ಕಾಲೇಜ್ ವಿಧ್ಯಾರ್ಥಿ ಬೈರೇಶ್, ಕ್ವಾಲಿಫಿಕೇಷನ್‍ನಲ್ಲಿ 99.75 ಅಂಕ ಪಡೆದಿದ್ದು, ಸಿಟಿಟಿಯಲ್ಲಿ 93.75 ಅಂಕ ಪಡೆದು ಮೊದಲ ರ್ಯಾಂಕ್ ಪಡೆದಿದ್ದಾರೆ.

ವೆಟನರಿ ಸೈನ್ಸ್ ವಿಭಾಗದಲ್ಲಿ ಮಾಳವಿಕ ಕಾಪೂರ್ ಮೊದಲ ರ್ಯಾಂಕ್ ಪಡೆದಿದ್ದು, ಸಿಇಟಿಯಲ್ಲಿ ಒಟ್ಟು 97.222 ಅಂಕ ಪಡೆದಿದ್ದಾರೆ. ಇವರು ಚಾಮರಾಜಪೇಟೆಯ ಮಹೇಶ್ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸಿಇಟಿ ಫಲಿತಾಂಶ ಪ್ರಕಟ : ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ನಟರಾಜ್ ಕುಮಾರಗೆ ಪ್ರಥಮ ರ್ಯಾಂಕ್ Rating: 5 Reviewed By: karavali Times
Scroll to Top