ಬೆಂಗಳೂರು, ಜೂನ್ 29, 2023 (ಕರಾವಳಿ ಟೈಮ್ಸ್) : ಜೂನ್ 12 ರಿಂದ 19ರವರೆಗೆ ನಡೆಸಲಾಗಿದ್ದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷಾ ಮೌಲ್ಯ ಮಾಪನ ಪ್ರಕ್ರಿಯೆ ಮುಕ್ತಾಯ ಕಂಡಿದ್ದು, ಫಲಿತಾಂಶ ಜೂನ್ 30 ರಂದು (ನಾಳೆ) ಘೋಷಣೆ ಮಾಡಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಜೂನ್ 30ರ ಶುಕ್ರವಾರ ಬೆಳಿಗ್ಗೆ 11 ಗಂಟೆಯ ನಂತರ ಮಂಡಳಿಯ ಅಧಿಕೃತ ವೆಬ್ ಸೈಟ್ ಗಳಾದ kseab.karnataka.gov.in ಅಥವಾ karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment