ಲೋಕಸಭಾಧ್ಯಕ್ಷ ಓಂ ಬಿರ್ಲಾ, ರಾಜ್ಯಸಭೆ ಸಭಾಪತಿ, ಉಪರಾಷ್ಟ್ರಪತಿ ಧನಕರ್ ಅವರನ್ನು ಭೇಟಿಯಾದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ - Karavali Times ಲೋಕಸಭಾಧ್ಯಕ್ಷ ಓಂ ಬಿರ್ಲಾ, ರಾಜ್ಯಸಭೆ ಸಭಾಪತಿ, ಉಪರಾಷ್ಟ್ರಪತಿ ಧನಕರ್ ಅವರನ್ನು ಭೇಟಿಯಾದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ - Karavali Times

728x90

10 June 2023

ಲೋಕಸಭಾಧ್ಯಕ್ಷ ಓಂ ಬಿರ್ಲಾ, ರಾಜ್ಯಸಭೆ ಸಭಾಪತಿ, ಉಪರಾಷ್ಟ್ರಪತಿ ಧನಕರ್ ಅವರನ್ನು ಭೇಟಿಯಾದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್

ನವದೆಹಲಿ, ಜೂನ್ 10, 2023 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿ ಇತ್ತೀಚೆಗೆ ನೇಮಕಗೊಂಡಿರುವ ಯು ಟಿ ಖಾದರ್ ಅವರು ಲೋಕಸಭಾಧ್ಯಕ್ಷ  ಓಂ ಬಿರ್ಲಾ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಸೌಹಾದರ್ಯುತವಾಗಿ ಭೇಟಿಯಾಗಿದ್ದು, ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. 

ಲೋಕಸಭಾಧ್ಯಕ್ಷರು ಸದನಗಳಲ್ಲಿ ನಿಯಮಾವಳಿಗಳಂತೆ ಚರ್ಚೆಗೆ ಅವಕಾಶ ನೀಡಿ, ಧರಣಿ ಮತ್ತು ಗದ್ದಲಗಳಿಗೆ ಮುಕ್ತಿ ಕೊಟ್ಟು ಕಾರ್ಯಕಲಾಪಗಳು ಸುಗಮವಾಗಿ ನಡೆಸುವ ಪರಂಪರೆಯನ್ನು ಬೆಳೆಸೋಣ ಎಂಬ ಸಲಹೆಯನ್ನು ನೀಡಿದ್ದಾರೆ.  ಈ ಭೇಟಿ ವಿಶೇಷವೇನಿಲ್ಲ. ಚರ್ಚೆಯು ಅತ್ಯಂತ ಸೌಹಾರ್ದಯುತವಾಗಿತ್ತು ಎಂದು ಸ್ಪೀಕರ್ ಯು ಟಿ ಖಾದರ್ ಇದೇ ವೇಳೆ ತಿಳಿಸಿದ್ದಾರೆ.

ಬಳಿಕ ರಾಜ್ಯಸಭೆಯ ಸಭಾಪತಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಕೂಡಾ ಸ್ಪೀಕರ್ ಯು ಟಿ ಖಾದರ್ ಭೇಟಿ ಮಾಡಿದ್ದಾರೆ. ಖಾದರ್ ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು ಕಿರಿಯ ವಯಸ್ಸಿನಲ್ಲಿ ವಹಿಸಿಕೊಂಡಿರುವುದನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಲೋಕಸಭಾಧ್ಯಕ್ಷ ಓಂ ಬಿರ್ಲಾ, ರಾಜ್ಯಸಭೆ ಸಭಾಪತಿ, ಉಪರಾಷ್ಟ್ರಪತಿ ಧನಕರ್ ಅವರನ್ನು ಭೇಟಿಯಾದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ Rating: 5 Reviewed By: karavali Times
Scroll to Top