ಗಿಡ-ಮರಗಳ ಪೋಷಣೆಯಿಂದ ಶುದ್ದ ವಾತಾವರಣ ನಿರ್ಮಾಣ : ಮಾಧವ ಗೌಡ - Karavali Times ಗಿಡ-ಮರಗಳ ಪೋಷಣೆಯಿಂದ ಶುದ್ದ ವಾತಾವರಣ ನಿರ್ಮಾಣ : ಮಾಧವ ಗೌಡ - Karavali Times

728x90

1 July 2023

ಗಿಡ-ಮರಗಳ ಪೋಷಣೆಯಿಂದ ಶುದ್ದ ವಾತಾವರಣ ನಿರ್ಮಾಣ : ಮಾಧವ ಗೌಡ

ಬಂಟ್ವಾಳ, ಜುಲೈ 01, 2023 (ಕರಾವಳಿ ಟೈಮ್ಸ್) : ಮಕ್ಕಳು ಪರಿಸರದ ಕುರಿತು ಅರಿತಾಗ ನೆಟ್ಟ ಗಿಡಗಳ ಬೆಳವಣಿಗೆ ಸಾಧ್ಯವಾಗುತ್ತದೆ. ಗಿಡ, ಮರಗಳನ್ನು ಪೆÇೀಷಿಸುವ ಮೂಲಕ ಶುದ್ಧ ವಾತಾವರಣ ನಿರ್ಮಾಣ ಅಗತ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ ಸಿ ಟ್ರಸ್ಟ್ ಬಂಟ್ವಾಳದ ಬಂಟ್ವಾಳ ಯೋಜನಾಧಿಕಾರಿ ಮಾಧವ ಗೌಡ ಅಭಿಪ್ರಾಯಪಟ್ಟರು. 

ಬಿ ಮೂಡ ಗ್ರಾಮದ ಬಿ ಸಿ ರೋಡು ಸಮೀಪದ ಅಜ್ಜಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಜನೆಯ ಬಿ ಸಿ ರೋಡು ವಲಯದ ಮಂಡಾಡಿ ಕಾರ್ಯಕ್ಷೇತ್ರ ವ್ಯಾಪ್ತಿಯ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಯೋಜನೆ ವತಿಯಿಂದ ಮಕ್ಕಳಿಗೆ ಆಯೋಜಿಸಲಾಗಿದ್ದ ಪರಿಸರ ಕುರಿತು ಚಿತ್ರ ರಚನಾ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ, ಶಾಲಾ ಆವರಣದಲ್ಲಿ ಗಿಡ ನೆಟ್ಟ ಬಳಿಕ ಶಾಲಾ ಮಕ್ಕಳಿಗೆ ಪರಿಸರ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಹರೀಶ ಮಾಂಬಾಡಿ ಮಾತನಾಡಿ, ಮಕ್ಕಳು ತರಕಾರಿ, ಹಣ್ಣಿನ ಸಸ್ಯಗಳ ಮಹತ್ವವನ್ನು ಅರಿತುಕೊಂಡು, ವಿಷ ರಹಿತ ವಾತಾವರಣ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದರು.

ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಶುಭ ಹಾರೈಸಿದರು. ಈ ಸಂದರ್ಭ ಬಿ ಸಿ ರೋಡು ವಲಯ ಮೇಲ್ವಿಚಾರಕಿ ವೇದಾವತಿ, ಪದಾಧಿಕಾರಿಗಳು, ಸಂಘದ ಸದಸ್ಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಆಶಾಲತಾ ಸ್ವಾಗತಿಸಿ, ಪದಾಧಿಕಾರಿ ವನಜಾ ವಂದಿಸಿದರು. 

ಇದೇ ವೇಳೆ ಶಾಲಾ ಮಕ್ಕಳಿಗೆ, ಸಂಘದ ಸದಸ್ಯರಿಗೆ ಗಿಡ ವಿತರಿಸಲಾಯಿತು. ಶಾಲೆಯಲ್ಲಿ ಬಿಸಿ ಊಟಕ್ಕೆ ಪೂರಕವಾಗುವಂತೆ ಶಾಲಾ ಕೈ ದೋಟವನ್ನು ರಚನೆ ಮಾಡಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಗಿಡ-ಮರಗಳ ಪೋಷಣೆಯಿಂದ ಶುದ್ದ ವಾತಾವರಣ ನಿರ್ಮಾಣ : ಮಾಧವ ಗೌಡ Rating: 5 Reviewed By: karavali Times
Scroll to Top