ಕರ್ನಾಟಕ ಕಂಡ ಶ್ರೇಷ್ಠ ಬಜೆಟ್, ಅಪರೂಪದಲ್ಲೇ ಅಪರೂಪದ ಬಜೆಟ್ : ಮಾಜಿ ಸಚಿವ ರೈ ಶ್ಲಾಘನೆ - Karavali Times ಕರ್ನಾಟಕ ಕಂಡ ಶ್ರೇಷ್ಠ ಬಜೆಟ್, ಅಪರೂಪದಲ್ಲೇ ಅಪರೂಪದ ಬಜೆಟ್ : ಮಾಜಿ ಸಚಿವ ರೈ ಶ್ಲಾಘನೆ - Karavali Times

728x90

7 July 2023

ಕರ್ನಾಟಕ ಕಂಡ ಶ್ರೇಷ್ಠ ಬಜೆಟ್, ಅಪರೂಪದಲ್ಲೇ ಅಪರೂಪದ ಬಜೆಟ್ : ಮಾಜಿ ಸಚಿವ ರೈ ಶ್ಲಾಘನೆ

ಬಂಟ್ವಾಳ, ಜುಲೈ 07, 2023 (ಕರಾವಳಿ ಟೈಮ್ಸ್) : ಸಿಎಂ ಸಿದ್ದರಾಮಯ್ಯರವರು ಮಂಡಿಸಿದ 2023-24ನೇ ಸಾಲಿನ ಬಜೆಟ್ ಈವರೆಗೆ ಕರ್ನಾಟಕದಲ್ಲಿ ಮಂಡನೆಯಾಗಿರುವ ಬಜೆಟ್‍ಗಳ ಪೈಕಿ ಶ್ರೇಷ್ಠ ಬಜೆಟ್. ಈ ಬಜೆಟ್ ಅಪರೂಪದಲ್ಲೇ ಅಪರೂಪದ ಬಜೆಟ್ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಕೊಂಡಾಡಿದ್ದಾರೆ. 

ರಾಜ್ಯ ಬಜೆಟ್ ಬಗ್ಗೆ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ಅವರು, ಐದು ಗ್ಯಾರಂಟಿ ಯೋಜನೆಗಳಿಗೆ ಅನುದಾನ ಒದಗಿಸುವುದರ ಜೊತೆಗೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ 76 ಪ್ರಣಾಳಿಕೆಗಳನ್ನು ಈ ಬಜೆಟ್ ನಲ್ಲಿ ಜಾರಿ ಮಾಡಿ ಘೋಷಣೆ ಮಾಡಲಾಗಿದೆ. ಈ ಬಜೆಟ್ ಎಲ್ಲಾ ವರ್ಗದ ಜನರ ಪರವಾದ ಬಜೆಟ್ ಆಗಿದ್ದು, ಸಮಾಜ ಸ್ನೇಹಿ, ಮಹಿಳಾ ಸ್ನೇಹಿ, ಯುವ ಸ್ನೇಹಿ, ರೈತ ಸ್ನೇಹಿ ಬಜೆಟ್ ಕೂಡ ಆಗಿರುತ್ತದೆ ಎಂದಿದ್ದಾರೆ. 

ಬಜೆಟ್ ನಲ್ಲಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲನ್ನು ನೀಡಲಾಗಿದೆ. ಎಲ್ಲಾ ಇಲಾಖೆಗಳಿಗೂ ಎಲ್ಲಾ ಪ್ರದೇಶಗಳಿಗೂ ಎಲ್ಲಾ ಕ್ಷೇತ್ರಗಳಿಗೂ ಎಲ್ಲಾ ಜಿಲ್ಲೆಗಳಿಗೂ ಎಲ್ಲಾ ವರ್ಗಗಳಿಗೂ ಈ ಬಜೆಟ್ ನ್ಯಾಯ ಒದಗಿಸಿದೆ. ಕರಾವಳಿ ಕರ್ನಾಟಕಕ್ಕೂ ಬಜೆಟ್ ನಲ್ಲಿ ಹೆಚ್ಚು ಆಧ್ಯತೆ ನೀಡಲಾಗಿದೆ. ಕರಾವಳಿಯ ಪ್ರವಾಸೋಧ್ಯಮ ಮತ್ತು ಮೀನುಗಾರ ಸಮುದಾಯಕ್ಕೆ ಬಲ ಕೊಟ್ಟಿದೆ. ಕರಾವಳಿ ಬೀಚ್ ಪ್ರವಾಸೋದ್ಯಮ ಕಾರ್ಯಪಡೆ ರಚನೆ, ಕಡಲ ತೀರದ ಸಮಗ್ರ ಅಭಿವೃದ್ಧಿಗಾಗಿ ವಿಸ್ತೃತ ಯೋಜನೆ ತಯಾರಿ ಮತ್ತು ಸಸಿಹಿತ್ಲು ಕಡಲ ತೀರವನ್ನು ಅಂತಾರಾಷ್ಟ್ರೀಯ ಸರ್ಫಿಂಗ್ ತಾಣವಾಗಿ ಅಭಿವೃದ್ಧಿಗೊಳಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ರೂಪಿಸಿರುವುದು ಕರಾವಳಿ ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ಮುಂದಕ್ಕೆ ಕೊಂಡೊಯ್ಯಲಿದೆ ಎಂದು ಅಭಿಪ್ರಾಯಪಟ್ಟ ರಮಾನಾಥ ರೈ ಮೀನುಗಾರ ಮಹಿಳೆಯರಿಗೆ ಬಡ್ಡಿರಹಿತವಾಗಿ ನೀಡುವ ಸಾಲವನ್ನು 50 ಸಾವಿರ ರೂಪಾಯಿಂದ 3 ಲಕ್ಷ ರೂಪಾಯಿಗೆ ಹೆಚ್ಚಿಸಿರುವುದರಿಂದ ಅವರ ಬದುಕು ಹಸನಾಗಲಿದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ನಾರಾಯಣ ಗುರು ವಸತಿ ಶಾಲೆ ಕೊಟ್ಟಿದ್ದಾರೆ. ಕರಾವಳಿಗೆ ದೊಡ್ಡ ಯೋಜನೆಗಳನ್ನು ಕೊಟ್ಟಿರುವ ಸಿದ್ದರಾಮಯ್ಯನವರಿಗೆ ಕರಾವಳಿ ಕರ್ನಾಟಕದ ಜನರ ಪರವಾಗಿ ಧನ್ಯವಾದಗಳು ಎಂದು ಮಾಜಿ ಸಚಿವ ರೈ ಹೇಳಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕರ್ನಾಟಕ ಕಂಡ ಶ್ರೇಷ್ಠ ಬಜೆಟ್, ಅಪರೂಪದಲ್ಲೇ ಅಪರೂಪದ ಬಜೆಟ್ : ಮಾಜಿ ಸಚಿವ ರೈ ಶ್ಲಾಘನೆ Rating: 5 Reviewed By: karavali Times
Scroll to Top