ಬಂಟ್ವಾಳ, ಜುಲೈ 26, 2023 (ಕರಾವಳಿ ಟೈಮ್ಸ್) : ಇಲ್ಲಿಗೆ ಸಮೀಪದ ಲೊರೆಟ್ಟೊ ಪದವು ಬಳಿ ಗುಡ್ಡ ಜರಿದು ಬಂಡೆ ಕಲ್ಲು ರಸ್ತೆಗೆ ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರ ಬಂದ್ ಆದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲೊರೆಟ್ಟೊಪದವು ಮಹಲ್ ತೋಟ ಎಂಬಲ್ಲಿನ ಸಂಪರ್ಕ ರಸ್ತೆ ಇದಾಗಿದ್ದು, ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಇಲ್ಲಿನ ರಸ್ತೆ ಬದಿಯ ಗುಡ್ಡ ಜರಿದು ಅದರ ಜೊತೆ ಬೃಹತ್ ಗಾತ್ರದ ಬಂಡೆಕಲ್ಲು ರಸ್ತೆಗೆ ಉರುಳಿ ಬಿದ್ದಿದೆ. ಬಂಡೆ ಕಲ್ಲು ಉರುಳಿ ಬಿದ್ದ ಪರಿಣಾಮ ರಸ್ತೆಯೂ ಹಾನಿಗೊಳಗಾಗಿದೆಯಲ್ಲದೆ ರಸ್ತೆ ಸಂಪರ್ಕವೂ ಸ್ಥಗಿತಗೊಂಡಿದೆ.
0 comments:
Post a Comment