ಶೇ 50 ರಷ್ಟು ಟ್ರಾಫಿಕ್ ದಂಡ ಪಾವತಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ ಸರಕಾರ : ಸೆ 9ರವೆಗೆ ಅರ್ಧದಷ್ಟು ದಂಡ ಪಾವತಿಸಲು ಅವಕಾಶ ನೀಡಿ ಸಾರಿಗೆ ಇಲಾಖೆ ಆದೇಶ - Karavali Times ಶೇ 50 ರಷ್ಟು ಟ್ರಾಫಿಕ್ ದಂಡ ಪಾವತಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ ಸರಕಾರ : ಸೆ 9ರವೆಗೆ ಅರ್ಧದಷ್ಟು ದಂಡ ಪಾವತಿಸಲು ಅವಕಾಶ ನೀಡಿ ಸಾರಿಗೆ ಇಲಾಖೆ ಆದೇಶ - Karavali Times

728x90

5 July 2023

ಶೇ 50 ರಷ್ಟು ಟ್ರಾಫಿಕ್ ದಂಡ ಪಾವತಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ ಸರಕಾರ : ಸೆ 9ರವೆಗೆ ಅರ್ಧದಷ್ಟು ದಂಡ ಪಾವತಿಸಲು ಅವಕಾಶ ನೀಡಿ ಸಾರಿಗೆ ಇಲಾಖೆ ಆದೇಶ

ಬೆಂಗಳೂರು, ಜುಲೈ 05, 2023 (ಕರಾವಳಿ ಟೈಮ್ಸ್) : ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ಪಾವತಿಗೆ ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಿ ರಾಜ್ಯ ಸರಕಾರ ಮತ್ತೆ ಆದೇಶ ಹೊರಡಿಸಿದೆ. 

ಚುನಾವಣೆಗೆ ಮುಂಚೆ 2 ಬಾರಿ ರಾಜ್ಯ ಸರಕಾರ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ಪಾವತಿಸಲು 50 ಶೇಕಡಾ ರಿಯಾಯಿತಿಯ ಅವಕಾಶ ನೀಡಿತ್ತು. ಈ ಸಂದರ್ಭ ಸರಕಾರ ಭಾರಿ ಮೊತ್ತದ ದಂಡ ಸಂಗ್ರಹಿಸಿತ್ತು. ಬಳಿಕ ಚುನಾವಣೆ ಘೋಷಣೆಯಾದ ಕಾರಣದಿಂದ ರಿಯಾಯಿತಿ ದರದ ದಂಡ ಪಾವತಿಯ ಅವಕಾಶವನ್ನು ಸರಕಾರ ಸ್ಥಗಿತಗೊಳಿಸಿತ್ತು. 

ಇದೀಗ ಮತ್ತೆ ರಿಯಾಯಿತಿ ಘೋಷಣೆ ಮಾಡಿರುವ ಸರಕಾರ ಸೆಪ್ಟೆಂಬರ್ 9ರವರೆಗೆ ದಂಡದ ಅರ್ಧದಷ್ಟು ಹಣ ಪಾವತಿಸಲು ವಾಹನ ಸವಾರರಿಗೆ ಅವಕಾಶ ಕಲ್ಪಿಸಿದೆ. ಈ ಸಂಬಂಧ ಬುಧವಾರ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಪೆÇಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‍ನಲ್ಲಿ 2023ರ ಫೆಬ್ರವರಿ 11ರ ಒಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ, ಮತ್ತೊಮ್ಮೆ ಶೇ. 50 ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಆದೇಶದಲ್ಲಿ ತಿಳಿಸಿದೆ. 

ಈ ಹಿಂದೆಯೂ 2 ಬಾರಿ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಸರ್ಕಾರ ಅವಕಾಶ £ೀಡಿತ್ತು. ನಂತರ ರಾಜ್ಯ ವಿಧಾನಸಭೆ ಘೋಷಣೆಯಾಗಿದ್ದು, ರಿಯಾಯಿತಿ ದರದ ದಂಡ ಪಾವತಿ ಅವಕಾಶ ಸ್ಥಗಿತಗೊಂಡಿತ್ತು.

  • Blogger Comments
  • Facebook Comments

0 comments:

Post a Comment

Item Reviewed: ಶೇ 50 ರಷ್ಟು ಟ್ರಾಫಿಕ್ ದಂಡ ಪಾವತಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ ಸರಕಾರ : ಸೆ 9ರವೆಗೆ ಅರ್ಧದಷ್ಟು ದಂಡ ಪಾವತಿಸಲು ಅವಕಾಶ ನೀಡಿ ಸಾರಿಗೆ ಇಲಾಖೆ ಆದೇಶ Rating: 5 Reviewed By: karavali Times
Scroll to Top