ಬಂಟ್ವಾಳ, ಆಗಸ್ಟ್ 28, 2023 (ಕರಾವಳಿ ಟೈಮ್ಸ್) : ಪತ್ನಿಯೇ ತನ್ನ ಪತಿಯೊಂದಿಗೆ ಅನಾವಶ್ಯಕ ಗಲಾಟೆ ಮಾಡಿದ್ದಲ್ಲದೆ ಸಹೋದರ-ಸಹೋದರಿಯರ ಜೊತೆ ಸೇರಿಕೊಂಡು ಅವ್ಯಾಚ್ಯವಾಗಿ ಬೈದು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಪತಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾವಳಪಡೂರು ಗ್ರಾಮದ ನಿವಾಸಿ ಬಿ ಮಹಮ್ಮದ್ ಫಾರೂಕ್ (46) ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಪತ್ನಿ ಜರೀನಾ ನನ್ನ ಜೊತೆ ಅನಾವಶ್ಯಕ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಬರುತ್ತಿದ್ದು, ಭಾನುವಾರ (ಆ 27) ಸಂಜೆ ಆರೋಪಿ ಜರೀನಾ ಹಾಗೂ ಆಕೆಯ ಅಕ್ಕ ನನ್ನ ಮನೆಗೆ ಬಂದು ಮನೆಯಲ್ಲಿ ಜೊಡಿಸಿದ್ದ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿ ಅವ್ಯಾಚವಾಗಿ ಬೈದು ಹೋಗಿದ್ದಾರೆ. ಬಳಿಕ ಸ್ವಲ್ಪ ಸಮಯದ ನಂತರ ಆರೋಪಿಗಳಾದ ಜರೀನಾಳ ಅಣ್ಣಂದಿರಾದ ಹನೀಫ್, ದಾವೂದ್, ಫಾರೂಕ್, ಮಜೀದ್ ಹಾಗೂ ಇನ್ನೋರ್ವ ಬೇರೆ ವ್ಯಕ್ತಿ ಕಾರಿನಲ್ಲಿ ಬಂದು ನನಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸು ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2023 ಕಲಂ 143, 147, 148, 447, 504, 323, 324, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment