ಅಟೋ ಚಾಲಕಗೆ ಹಲ್ಲೆ ಪ್ರಕರಣ : ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಖಂಡನೆ, ಮುಖಂಡರಿಂದ ಆಸ್ಪತ್ರೆಗೆ ಭೇಟಿ - Karavali Times ಅಟೋ ಚಾಲಕಗೆ ಹಲ್ಲೆ ಪ್ರಕರಣ : ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಖಂಡನೆ, ಮುಖಂಡರಿಂದ ಆಸ್ಪತ್ರೆಗೆ ಭೇಟಿ - Karavali Times

728x90

3 August 2023

ಅಟೋ ಚಾಲಕಗೆ ಹಲ್ಲೆ ಪ್ರಕರಣ : ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಖಂಡನೆ, ಮುಖಂಡರಿಂದ ಆಸ್ಪತ್ರೆಗೆ ಭೇಟಿ

 ಬೆಳ್ತಂಗಡಿ, ಆಗಸ್ಟ್ 04, 2023 (ಕರಾವಳಿ ಟೈಮ್ಸ್) :  ತಾಲೂಕಿನ ಉಜಿರೆ-ಅತ್ತಾಜೆ ನಿವಾಸಿ ಅಬ್ದುಲ್ ಹಮೀದ್ ಅವರ ಪುತ್ರ ಮಹಮ್ಮದ್ ಆಶೀಕ್ ಎಂಬ ಆಟೋ ಚಾಲಕನಿಗೆ ಧರ್ಮಸ್ಥಳಕ್ಕೆ ಬಾಡಿಗೆ ಹೋಗಿದ್ದ ಸಂದರ್ಭದಲ್ಲಿ ಧರ್ಮಸ್ಥಳದ ದೇವಸ್ಥಾನದ ದ್ವಾರದ ಬಳಿ ಬೈಕಿನಲ್ಲಿ ಬಂದ ಅಪರಿಚಿತರು ಆಟೊವನ್ನು ನಿಲ್ಲಿಸಿ ಹಿಡಿದೆಳೆದು ಗಂಭೀರ ಹಲ್ಲೆ ನಡೆಸಿದ್ದಲ್ಲದೆ ಆತನಲ್ಲಿದ್ದ ಹಣವನ್ನು ದೋಚಿಕೊಂಡು ಹೋಗಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಾಯಕರು ಹಲ್ಲೆಗೊಳಾದ ಮಹಮ್ಮದ್ ಆಶೀಕ್ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ನಿಯೋಗದಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ (ನಗರ) ಅಧ್ಯಕ್ಷ ಕೆ ಸಲೀಂ, ಕೆ.ಪಿ.ಸಿ.ಸಿ ಕಾರ್ಮಿಕ ಘಟಕದ ಪ್ರದಾನ ಕಾರ್ಯದರ್ಶಿ ಅಬ್ದುಲ್‌ ರಹಿಮಾನ್ ಪಡ್ಪು, ಬೆಳ್ತಂಗಡಿ ಕಾರ್ಮಿಕ (ನಗರ) ಘಟಕದ ಅಧ್ಯಕ್ಷ ಮೆಹಬೂಬ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಖಾಲೀದ್ ಕೆ.ಎಚ್, ಬೆಳ್ತಂಗಡಿ ಅಲ್ಪಸಂಖ್ಯಾತ (ನಗರ) ಘಟಕದ ಪ್ರದಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕುಂಟಿನಿ, ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಆರೀಫ್ ಬೆಳ್ತಂಗಡಿ ಮೊದಲಾದವರು ಇದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಅಟೋ ಚಾಲಕಗೆ ಹಲ್ಲೆ ಪ್ರಕರಣ : ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಖಂಡನೆ, ಮುಖಂಡರಿಂದ ಆಸ್ಪತ್ರೆಗೆ ಭೇಟಿ Rating: 5 Reviewed By: lk
Scroll to Top