ಪುತ್ತೂರು, ಆಗಸ್ಟ್ 24, 2023 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಬಕ ಗ್ರಾಮದ ಶೇವಿರೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಇಲಾಖಾ ಅನುಮತಿಯನ್ನು ಪಡೆಯದೇ ನಡೆಯುತ್ತಿದ್ದ ಕೋಳಿ ಅಂಕ ಜೂಜಾಟಕ್ಕೆ ದಾಳಿ ನಡೆಸಿದ ಪೊಲೀಸರು ಜೂಜಾಟಕ್ಕೆ ಬಳಸಿದ ಸಾಮಾಗ್ರಿಗಳ ಸಹಿತ 4 ಮಂದಿಯನ್ನು ಬಂಧಿಸಿದ್ದಾರೆ.
ಪುತ್ತೂರು ಪಡ್ನೂರು ಗ್ರಾಮದ ನಿವಾಸಿಗಳಾದ ಸನತ್ ಪೂಜಾರಿ (23), ಭರತ್ ಪೂಜಾರಿ (22), ಕಬಕ ನಿವಾಸಿ ರವಿ (38), ಬನ್ನೂರು ನಿವಾಸಿ ಅಭಿಜಿತ್ ಎಂಬವರೇ ಬಂಧಿತ ಆರೋಪಿಗಳು, ಬಂಧಿತರದಿಂದ ಎರಡು ಕೋಳಿಗಳು, ಒಂದು ಕೋಳಿ ಬಾಳು, ಹಾಗೂ 600 ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 84/2023 ಕಲಂ 87 ಕೆಪಿ ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ.
0 comments:
Post a Comment