ಹಳ್ಳಿ ಮಕ್ಕಳಿಗೆ ಸಮರ್ಪಕ ತರಬೇತಿ ದೊರೆತರೆ ಪ್ರತಿಭೆ ಹೊರಬರಲು ಸಾಧ್ಯ : ಶಾಸಕ ರಾಜೇಶ್ ನಾಯಕ್ - Karavali Times ಹಳ್ಳಿ ಮಕ್ಕಳಿಗೆ ಸಮರ್ಪಕ ತರಬೇತಿ ದೊರೆತರೆ ಪ್ರತಿಭೆ ಹೊರಬರಲು ಸಾಧ್ಯ : ಶಾಸಕ ರಾಜೇಶ್ ನಾಯಕ್ - Karavali Times

728x90

8 August 2023

ಹಳ್ಳಿ ಮಕ್ಕಳಿಗೆ ಸಮರ್ಪಕ ತರಬೇತಿ ದೊರೆತರೆ ಪ್ರತಿಭೆ ಹೊರಬರಲು ಸಾಧ್ಯ : ಶಾಸಕ ರಾಜೇಶ್ ನಾಯಕ್

ಬಂಟ್ವಾಳ, ಆಗಸ್ಟ್ 08, 2023 (ಕರಾವಳಿ ಟೈಮ್ಸ್) : ಹಳ್ಳಿ ಅಥವಾ ಗ್ರಾಮೀಣ ಭಾಗದ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ತರಬೇತಿ ದೊರೆತರೆ ಅವರು ಕ್ರೀಡೆಯಲ್ಲಿ ರಾಷ್ಟç-ಅಂತರಾಷ್ಟç ಮಟ್ಟಕ್ಕೂ ತಮ್ಮ ಕೀತೀ ಪತಾಕೆ ಹಾರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಹೇಳಿದರು. 

ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿಷಕರ ಕಛೇರಿ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ನರಿಕೊಂಬು ಇವುಗಳ ಸಂಯುಕ್ತ ಆಶ್ರಯದಲ್ಲಿ ನೆಡದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ 14 ರಿಂದ 17 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ  “ಜಂಪ್ ರೋಫ್’ ಹಾಗೂ “ರೋಫ್ ಸ್ಕಿಪ್ಪಿಂಗ್” ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಕ್ರೀಡೆಯನ್ನು ಎಳೆಪ್ರಾಯದಲ್ಲೇ ಅಳವಡಿಸಿಕೊಂಡರೆ ಅದರಲ್ಲಿ ತಮ್ಮ ಭವಿಷ್ಯವನ್ನೂ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಸಮರ್ಪಕವಾದ ತರಬೇತಿ ಅಗತ್ಯ ಎಂದರು. 



ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪುರುಷೋತ್ತಮ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ನರಿಕೊಂಬು ಶಾಲಾ ಸ್ಥಳದಾನಿ ಗುರುದತ್ ಭಟ್, ನರಿಕೊಂಬು ಗ್ರಾ ಪಂ ಉಪಾಧ್ಯಕ್ಷ ಪ್ರಕಾಶ್ ಮಡಿಮುಗೆರು, ಸದಸ್ಯರುಗಳಾದ ರಂಜಿತ್ ಕೆದ್ದೇಲ್, ಕಿಶೋರ್ ಶೆಟ್ಟಿ,  ಚಿತ್ರಾಕ್ಷಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವು ಬಿರಾದಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್, ಉಪಾಧ್ಯಕ್ಷೆ ಉಷಾಲಾಕ್ಷಿ, ಬಿ ಆರ್ ಪಿ ರಾಘವೇಂದ್ರ ಬಲ್ಲಾಲ್, ನಿಕಟಪೂರ್ವ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಬಂಟ್ವಾಳ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ಬಂಟ್ವಾಳ ತಾಲೂಕು ಶಿಕ್ಷಣ ಸಂಯೋಜಕಿಯರಾದ ಸುಜಾತ ಹಾಗೂ ಶ್ರೀಮತಿ ಸುಧಾ, ಬಾಲ್ತಿಲ ಕ್ಲಸ್ಟರ್ ಸಿ ಆರ್ ಪಿ ಸತೀಶ್ ರಾವ್, ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ಘಟಕಾಧ್ಯಕ್ಷ ಉಮನಾಥ ರೈ ಮೇರಾವು, ದಕ್ಷಿಣ ಕನ್ನಡ ಜಿಲ್ಲಾ ಪ್ರಾಥಮಿಕ  ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ನವೀನ್ ಪಿ ಎಸ್, ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್, ಉಪಾಧ್ಯಕ್ಷ ಜಗದೀಶ್ ರೈ ತುಂಬೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ರತ್ನಾವತಿ, ಕಾರ್ಯದರ್ಶಿ ಸಂತೋಷ್ ಚೆನ್ನೆöÊತೋಡಿ, ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಿದ ಎಡಪದವು ಸ್ವಾಮಿ ವಿವೇಕಾನಂದ ಕಾಲೇಜು ಉಪನ್ಯಾಸಕರಾದ ಪ್ರೇಮನಾಥ್ ಶೆಟ್ಟಿ, ಸುಂಕದಕಟ್ಟೆ ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜು ಉಪನ್ಯಾಸಕ ನವೀನ್ ಭಾಗವಹಿಸಿದ್ದರು. 

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಒಟ್ಟು 429 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ನರಿಕೊಂಬು ಶಾಲಾ ಮುಖ್ಯ ಶಿಕ್ಷಕಿ ಪ್ರೇಮ ಸ್ವಾಗತಿಸಿ, ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಪರೀಕ್ಷಾಧಿಕಾರಿ ಭುವನೇಶ್ ಪ್ರಸ್ತಾವನೆಗೈದರು. ಶಿಕ್ಷಕಿಯರಾದ ವಿಮಲಾ ಪ್ರಸಿಲ್ಲ ಪಿಂಟೋ ವಂದಿಸಿ, ಶೋಭಾ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಹಳ್ಳಿ ಮಕ್ಕಳಿಗೆ ಸಮರ್ಪಕ ತರಬೇತಿ ದೊರೆತರೆ ಪ್ರತಿಭೆ ಹೊರಬರಲು ಸಾಧ್ಯ : ಶಾಸಕ ರಾಜೇಶ್ ನಾಯಕ್ Rating: 5 Reviewed By: karavali Times
Scroll to Top