ಉಪ್ಪಿನಂಗಡಿ, ಆಗಸ್ಟ್ 10, 2023) : ಪುತ್ತೂರು ತಾಲೂಕು, ಉಪ್ಪಿನಂಗಡಿ ಗ್ರಾಮದ ಸಿ ಎ ಬ್ಯಾಂಕ್ ಬಳಿ ಬುಧವಾರ (ಆ 9) ಮಾದಕ ಅಮಲು ಪದಾರ್ಥ ಸೇವನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ನಶೆಯಲ್ಲಿ ಹೀನಾಯವಾಗಿ ಮಾತನಾಡುತ್ತಾ ಅನುಚಿತವಾಗಿ ವರ್ತಿಸುತ್ತಿದ್ದ ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ ನಿವಾಸಿ ಮಹಮ್ಮದ್ ಶಾಫಿ ( 30 ) ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಈತ ಮಾದಕ ದ್ರವ್ಯ ಗಾಂಜಾ ಸೇವನೆ ಮಾಡಿರುವುದನ್ನು ಪೊಲೀಸರಲ್ಲಿ ಒಪ್ಪಿಕೊಂಡಿರುತ್ತಾನೆ. ಈತನಿಂದ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 104/2023 ಕಲಂ 27 (ಬಿ) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment