ಬಂಟ್ವಾಳ, ಆಗಸ್ಟ್ 31, 2023 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಕೈಕಂಬ ಪೊಳಲಿ ದ್ವಾರದ ಜಂಕ್ಷನ್ ಬಳಿ ಅಕ್ರಮ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಸೆನ್ ಪೊಲೀಸರು ಮೂವರು ಆರೋಪಿಗಳನ್ನು ನಗದು ಸಹಿತ ವಶಕ್ಕೆ ಪಡೆದುಕೊಂಡಿದ್ದು, ಇತರ ಆರೋಪಿಗಳು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಬುಧವಾರ ಮಧ್ಯಾಹ್ನ ದಾಳಿ ನಡೆಸಿದ ಸೆನ್ ಪೊಲೀಸರು ಮಂಜೇಶ್ವರ-ಹೊಸಂಗಡಿ ನಿವಾಸಿ ಶ್ರೀಧರ ಎಂ ಎಸ್ (43), ಬಂಟ್ವಾಳ-ಅಮ್ಮುಂಜೆ ನಿವಾಸಿ ಥಾಮಸ್ (53) ಹಾಗೂ ಮಂಗಳೂರು-ನೀರುಮಾರ್ಗ ನಿವಾಸಿ ಜಾಕೀರ್ ಹುಸೈನ್ (34) ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದವರು ಓಡಿ ಹೋಗಿರುತ್ತಾರೆ.
ಬಂಧಿತರ ಆರೋಪಿಗಳಿಂದ ಮಟ್ಕಾ ಬರೆಯುತ್ತಿದ್ದ ಪುಸ್ತಕಗಳು ಹಾಗೂ ನಗದು ಹಣ 250/- ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 95/2023 ಕಲಂ 78 ಕರ್ನಾಟಕ ಪೆÇೀಲಿಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment