ಸೆಪ್ಬಂಬರ್ 17ರಂದು ಬಂಟ್ವಾಳ ಕುಲಾಲ ಸೇವಾದಳದ ವತಿಯಿಂದ ಕೃಷ್ಣ ಕೃಷ್ಣ ಶ್ರೀಕೃಷ್ಣಾ : ಕೃಷ್ಣ ವೇಷ ಸ್ಪರ್ಧೆ - Karavali Times ಸೆಪ್ಬಂಬರ್ 17ರಂದು ಬಂಟ್ವಾಳ ಕುಲಾಲ ಸೇವಾದಳದ ವತಿಯಿಂದ ಕೃಷ್ಣ ಕೃಷ್ಣ ಶ್ರೀಕೃಷ್ಣಾ : ಕೃಷ್ಣ ವೇಷ ಸ್ಪರ್ಧೆ - Karavali Times

728x90

2 September 2023

ಸೆಪ್ಬಂಬರ್ 17ರಂದು ಬಂಟ್ವಾಳ ಕುಲಾಲ ಸೇವಾದಳದ ವತಿಯಿಂದ ಕೃಷ್ಣ ಕೃಷ್ಣ ಶ್ರೀಕೃಷ್ಣಾ : ಕೃಷ್ಣ ವೇಷ ಸ್ಪರ್ಧೆ

ಬಂಟ್ವಾಳ, ಸೆಪ್ಟೆಂಬರ್ 02, 2023 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ರಿ. ಇದರ ಅಧೀನದ ಕುಲಾಲ ಸೇವಾದಳದ ವತಿಯಿಂದ ಸೆಪ್ಟಂಬರ್ 17 ರಂದು ಬಿ.ಸಿ.ರೋಡಿನ ಪೆÇಸಳ್ಳಿ ಬಳಿಯ ಕುಲಾಲ ಸಮುದಾಯ ಭವನದಲ್ಲಿ ಕೃಷ್ಣ ಕೃಷ್ಣ ಶ್ರೀಕೃಷ್ಣ - ಎಂಬ ಕುಲಾಲರ ಕೃಷ್ಣ ವೇಷ ಸ್ಪರ್ಧೆ, ನನ್ನ ಕನಸಿನ ಕೃಷ್ಣ- ಚಿತ್ರಕಲಾ ಸ್ಪರ್ಧೆ ಮತ್ತು ಕುಸಾಲ್ ಪಾತೆರದ ಬಿರ್ಸೆರ್ - ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ.

6 ತಿಂಗಳಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಮುದ್ದು ಕೃಷ್ಣ ವೇಷ, 5 ರಿಂದ ಮೇಲ್ಪಟ್ಟು 10 ವರ್ಷದೊಳಗಿನ ಮಕ್ಕಳಿಗೆ ಬಾಲಕೃಷ್ಣ, ರಾಧಾಕೃಷ್ಣ ಮತ್ತು ಯಶೋಧಾ ಕೃಷ್ಣ ಸ್ಪರ್ಧೆಗೆ ಯಾವುದೇ ವಯೋಮಿತಿ ಇರುವುದಿಲ್ಲ. ಚಿತ್ರಕಲೆಯಲ್ಲಿ ಕಿರಿಯ ಮತ್ತು ಹಿರಿಯ ವಿಭಾಗಗಳಿರುತ್ತದೆ. ಕುಸಾಲ್ ಪಾತೆರದ ಬಿರ್ಸೆರ್ ಸ್ಪರ್ಧೆಯಲ್ಲಿ ಯಾವುದೇ ವಯೋಮಿತಿ ಇರುವುದಿಲ್ಲ. ಆದರೆ ಹಾಸ್ಯದಲ್ಲಿ ರಾಜಕೀಯ, ಜಾತಿನಿಂದನೆ ಮತ್ತು ಅಶ್ಲೀಲ ಮಾತುಗಳನುÐ ಬಳಸುವಂತಿಲ್ಲ. ವೇದಿಕೆಯಲ್ಲಿ ಪ್ರದರ್ಶಿಸುವ ಹಾಸ್ಯದ ತುಣುಕನ್ನು ವೀಡಿಯೋ ಮಾಡಿ 9880836173ಕ್ಕೆ ಕಳುಹಿಸಬೇಕು. ಎಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸುವವರು ಸೆಪ್ಟಂಬರ್ 10ರೊಳಗೆ ತಮ್ಮ ಹೆಸರು ನೋಂದಾಯಿಸಬೇಕು. 

ಅದೇ ದಿನ ಮಧ್ಯಾಹ್ನ 3.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ತಾಲೂಕು ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಉಪಸ್ಥಿತಿಯಲ್ಲಿ ಸಿನಿಮಾ ಆರ್ಟ್ ಡೈರೆಕ್ಟರ್ ರಾಜೇಶ್ ಕೊಳಕೆ, ಉಪನ್ಯಾಸಕ ಮತ್ತು ಖ್ಯಾತ ಸಂಗೀತಗಾರ ಶುಭಮ್ ಮತ್ತು ರಂಗಭೂಮಿ ಕಲಾವಿದ ಮೇಧಾವಿ ಮಡಂತ್ಯಾರ್ ಉಪಸ್ಥಿತರಿರುವರು. 

ಸಭಾ ಕಾರ್ಯಕ್ರಮದಲ್ಲಿ ನಿರಂತರ ಕಾರ್ಯಾಗಾರದ ಮೂರನೇ ಹಂತದ ಚೈತನ್ಯ 3.0ಕ್ಕೆ ಚಾಲನೆ ದೊರೆಯಲಿದೆ. ಡ್ಯಾನ್ಸ್, ಯಕ್ಷನಾಟ್ಯ, ಚಿತ್ರಕಲೆ, ನಾಯಕತ್ವದ ಜೊತೆಗೆ ರಂಗ ನಟನೆಗೆ ಚಾಪರ್ಕ ತಂಡದ ಕಲಾವಿದ ಸುರೇಶ್ ಕುಲಾಲ್, ಶಿಕ್ಷಣ ಮಾರ್ಗದರ್ಶಕರಾಗಿ ಲೋಕೇಶ್ ಕುಲಾಲ್ ನಾರ್ಶ, ಆರೋಗ್ಯ ಚೈತನ್ಯ ಡಾ ಅಶ್ವನಿ ಬಾಲಕೃಷ್ಣ ಅಗ್ರಬೈಲು ಮತ್ತು ಯೋಗ ತರಬೇತಿಗಾಗಿ ಕಿಶೋರ್ ಕುಲಾಲ್ ಕೈಕುಂಜೆ ಭಾಗವಹಿಸುವರು. 

ಬಳಿಕ ಕುಲಾಲ ಸೇವಾ ದಳದ ಸದಸ್ಯರಿಂದ ಸಾಂಸ್ಕೃತಿಕ ವೈಭ, ವಿನೂತನ ಶೈಲಿಯಲ್ಲಿ ಕಥಾ ರೂಪಕ ಪುಣ್ಯಕೋಟಿ ಮತ್ತು ಚಂದ್ರಯಾನ-3 ಕಾರ್ಯಕ್ರಮ ನಡೆಯಲಿದೆ ಎಂದು ಕುಲಾಲ ಸೇವಾದಳದ ದಳಪತಿ ರಾಜೇಶ್ ಕುಮಾರ್ ಎಚ್ ಹಾಗೂ ಕಾರ್ಯದರ್ಶಿ ಜಯಂತ ಅಗ್ರಬೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸೆಪ್ಬಂಬರ್ 17ರಂದು ಬಂಟ್ವಾಳ ಕುಲಾಲ ಸೇವಾದಳದ ವತಿಯಿಂದ ಕೃಷ್ಣ ಕೃಷ್ಣ ಶ್ರೀಕೃಷ್ಣಾ : ಕೃಷ್ಣ ವೇಷ ಸ್ಪರ್ಧೆ Rating: 5 Reviewed By: karavali Times
Scroll to Top