ಪಲ್ಲಮಜಲು : ಲಕ್ಷಾಂತರ ರೂಪಾಯಿ ಮೌಲ್ಯದ ಕ್ರಶರ್ ಯಂತ್ರ ಕಳವು : ದೂರು ದಾಖಲು - Karavali Times ಪಲ್ಲಮಜಲು : ಲಕ್ಷಾಂತರ ರೂಪಾಯಿ ಮೌಲ್ಯದ ಕ್ರಶರ್ ಯಂತ್ರ ಕಳವು : ದೂರು ದಾಖಲು - Karavali Times

728x90

15 August 2023

ಪಲ್ಲಮಜಲು : ಲಕ್ಷಾಂತರ ರೂಪಾಯಿ ಮೌಲ್ಯದ ಕ್ರಶರ್ ಯಂತ್ರ ಕಳವು : ದೂರು ದಾಖಲು

ಬಂಟ್ವಾಳ, ಆಗಸ್ಟ್ 15, 2023 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ಪಲ್ಲಮಜಲುವಿನ ಲಕ್ಷ್ಮೀ ಕ್ರಶರ್ ಘಟಕದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಾಗ್ರಿಗಳು ಕಳವಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪಲ್ಲಮಜಲು ನಿವಾಸಿ ಪಿ ವಿನಯ ಶೆಟ್ಟಿ ಅವರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದು, ಕಳೆದ ಸುಮಾರು 20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮೀ ಕ್ರಶರ್ ಕಳೆದ 1 ವರ್ಷದಿಂದ ಮುಚ್ಚಲಾಗಿತ್ತು. ಕ್ರಶರಿನಲ್ಲಿದ್ದ ಸುಮಾರು 2.60 ಲಕ್ಷ ರೂಪಾಯಿ ಮೌಲ್ಯದ 450 ಕೆಜಿ ತೂಕದ ಕ್ರಶರ್ ಯಂತ್ರ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2023 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪಲ್ಲಮಜಲು : ಲಕ್ಷಾಂತರ ರೂಪಾಯಿ ಮೌಲ್ಯದ ಕ್ರಶರ್ ಯಂತ್ರ ಕಳವು : ದೂರು ದಾಖಲು Rating: 5 Reviewed By: karavali Times
Scroll to Top