ಜುಗಾರಿ ಅಡ್ಡೆಗೆ ಬೆಳ್ತಂಗಡಿ ಪೊಲೀಸರ ದಾಳಿ : ಆರೋಪಿಗಳು ಪರಾರಿ, ನಗದು ಹಣ ವಶಕ್ಕೆ - Karavali Times ಜುಗಾರಿ ಅಡ್ಡೆಗೆ ಬೆಳ್ತಂಗಡಿ ಪೊಲೀಸರ ದಾಳಿ : ಆರೋಪಿಗಳು ಪರಾರಿ, ನಗದು ಹಣ ವಶಕ್ಕೆ - Karavali Times

728x90

24 September 2023

ಜುಗಾರಿ ಅಡ್ಡೆಗೆ ಬೆಳ್ತಂಗಡಿ ಪೊಲೀಸರ ದಾಳಿ : ಆರೋಪಿಗಳು ಪರಾರಿ, ನಗದು ಹಣ ವಶಕ್ಕೆ

ಬೆಳ್ತಂಗಡಿ, ಸೆಪ್ಟೆಂಬರ್ 24, 2023 (ಕರಾವಳಿ ಟೈಮ್ಸ್) : ತಾಲೂಕಿನ ಬೆಳ್ತಂಗಡಿ ಕಸಬಾ ಗ್ರಾಮದ ಸುದೆ ಮುಗೇರು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು, ಇಸ್ಪೀಟ್ ಎಲೆಗಳಿಂದ ಉಳಾಯಿ- ಪಿದಾಯಿ ಜುಗಾರಿ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ನಗದು ಸಹಿತ ಕೃತ್ಕಕ್ಕೆ ಬಳಸುತ್ತಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. 

ದಾಳಿ ವೇಳೆ ಪೊಲೀಸರು ಜುಗಾರಿ ಆಟಕ್ಕೆ ಉಪಯೋಗಿಸಿದ 6,800/- ರೂಪಾಯಿ ನಗದು ಹಣ, ಇಸ್ಟೀಟು ಎಲೆಗಳು, ಹಾಗೂ 1  ಟವೇಲು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಾರಿಯಾದ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಜುಗಾರಿ ಅಡ್ಡೆಗೆ ಬೆಳ್ತಂಗಡಿ ಪೊಲೀಸರ ದಾಳಿ : ಆರೋಪಿಗಳು ಪರಾರಿ, ನಗದು ಹಣ ವಶಕ್ಕೆ Rating: 5 Reviewed By: karavali Times
Scroll to Top