ಕಲಾ ತಪಸ್ವಿ ಸಾಂಸ್ಕೃತಿಕ ತಂಡದ ಮುದ್ದು ಶ್ರೀ ಕೃಷ್ಣ ಭಾವಚಿತ್ರ ಸ್ಪರ್ಧೆ : ನಕ್ಷತ್ರ ಮಂಗಳೂರುಗೆ ಪ್ರಥಮ ಬಹುಮಾನ - Karavali Times ಕಲಾ ತಪಸ್ವಿ ಸಾಂಸ್ಕೃತಿಕ ತಂಡದ ಮುದ್ದು ಶ್ರೀ ಕೃಷ್ಣ ಭಾವಚಿತ್ರ ಸ್ಪರ್ಧೆ : ನಕ್ಷತ್ರ ಮಂಗಳೂರುಗೆ ಪ್ರಥಮ ಬಹುಮಾನ - Karavali Times

728x90

14 September 2023

ಕಲಾ ತಪಸ್ವಿ ಸಾಂಸ್ಕೃತಿಕ ತಂಡದ ಮುದ್ದು ಶ್ರೀ ಕೃಷ್ಣ ಭಾವಚಿತ್ರ ಸ್ಪರ್ಧೆ : ನಕ್ಷತ್ರ ಮಂಗಳೂರುಗೆ ಪ್ರಥಮ ಬಹುಮಾನ

ಮಂಗಳೂರು, ಸೆಪ್ಟೆಂಬರ್ 14, 2023 (ಕರಾವಳಿ ಟೈಮ್ಸ್) : ಕಲಾತಪಸ್ವಿ ಸಾಂಸ್ಕೃತಿಕ ತಂಡ ಆಯೋಜಿಸಿದ್ದ “ಮುದ್ದು ಶ್ರೀ ಕೃಷ್ಣ ಭಾವಚಿತ್ರ ಸ್ಪರ್ಧೆ-2023” ಆನ್ಲೈನ್ ಸ್ಪರ್ಧೆಯಲ್ಲಿ ನಕ್ಷತ್ರ ಮಂಗಳೂರು ಪ್ರಥಮ, ವೇದಾಂತ ಬಂಟ್ವಾಳ ದ್ವಿತೀಯ ಹಾಗೂ ಶಿವಾಂಕ್ ಮಂಗಳೂರು ತೃತೀಯ ಸ್ಥಾನ ಪಡೆದಿದ್ದಾರೆ. 

ರಾಜ್ಯಮಟ್ಟದಲ್ಲಿ ಸುಮಾರು 50 ದಿನಗಳ ಕಾಲ ಸಾಗಿದ ಈ ಸ್ಪರ್ಧೆಯಲ್ಲಿ ರಾಜ್ಯದ 15 ಜಿಲ್ಲೆಗಳಿಂದ ಒಟ್ಟು 456 ಸ್ಪರ್ಧಿಗಳು ಭಾಗವಹಿಸಿದ್ದರು. 

ವಿಜೇತರು ಬಹುಮಾನವಾಗಿ ಪ್ರಥಮ 3,001/- ರೂಪಾಯಿ, ದ್ವಿತೀಯ 2,001/- ರೂಪಾಯಿ, ತೃತೀಯ 1,001/- ರೂಪಾಯಿ ನಗದು ಹಾಗೂ ಶ್ರೀಕೃಷ್ಣ ಟ್ರೋಫಿ, ಪ್ರಶಸ್ತಿ ಪತ್ರವನ್ನು ಪಡೆಯಲಿದ್ದು, ಸೆ 19 ರಂದು ಕಂಬಳಬೆಟ್ಟು-ಧರ್ಮನಗರದಲ್ಲಿ ನಡೆಯಲಿರುವ 52ನೇ ವರ್ಷದ ಶ್ರೀ ಮಹಾಗಣೇಶೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಕಲಾತಪಸ್ವಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಲಾ ತಪಸ್ವಿ ಸಾಂಸ್ಕೃತಿಕ ತಂಡದ ಮುದ್ದು ಶ್ರೀ ಕೃಷ್ಣ ಭಾವಚಿತ್ರ ಸ್ಪರ್ಧೆ : ನಕ್ಷತ್ರ ಮಂಗಳೂರುಗೆ ಪ್ರಥಮ ಬಹುಮಾನ Rating: 5 Reviewed By: karavali Times
Scroll to Top