ಬಂಟ್ವಾಳ, ಅಕ್ಟೋಬರ್ 24, 2023 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಅಟೋ ರಿಕ್ಷಾ ಪ್ರಯಾಣಿಕರೋರ್ವರು ಮೃತಪಟ್ಟು ಇತರ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಕರೆಂಬಿಲ ಎಂಬಲ್ಲಿ ಸೋಮವಾರ ನಡೆದಿದೆ.
ಮೃತ ಪ್ರಯಾಣಿಕನನ್ನು ನಾಗೇಶ್ ಭಟ್ ಎಂದು ಹೆಸರಿಸಲಾಗಿದ್ದು, ಗಾಯಾಳುಗಳನ್ನು ಅಲ್ಫೋನ್ಸಾ ಫೆರಾವೋ ಹಾಗೂ ಅಣ್ಣು ಎಂದು ಹೆಸರಿಸಲಾಗಿದೆ. ಮುಹಮ್ಮದ್ ನೌಫಲ್ ಎಂಬವರ ಅಟೋ ರಿಕ್ಷಾದಲ್ಲಿ ಇವರು ಪ್ರಯಾಣಿಸುತ್ತಿದ್ದ ವೇಳೆ ಪೆರುವಾಯಿ-ಕಡೆಂಬಿಲ ಎಂಬಲ್ಲಿ ಸ್ಕೂಟರ್ ಸವಾರ ವಿನೋದ್ ಎಂಬವರ ಅಜಾಗರೂಕತೆಯ ಚಾಲನೆಯಿಂದ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಅಟೋ ರಿಕ್ಷಾ ಹಾಗೂ ಸ್ಕೂಟರ್ ರಸ್ತೆಗೆ ಮಗುಚಿ ಬಿದ್ದು ಅಟೋ ರಿಕ್ಷಾ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರ ಗಾಯಗೊಂಡಿದ್ದ ನಾಗೇಶ್ ಭಟ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment