ಉಪ್ಪಿನಂಗಡಿ, ಅಕ್ಟೋಬರ್ 24, 2023 (ಕರಾವಳಿ ಟೈಮ್ಸ್) : ಮನೆಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪೊದೆಗಳ ನಡುವೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತಾಘಾತದಿಂದಾಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು ಬೆಳ್ತಂಗಡಿ ತಾಲೂಕು, ಕರಾಯ ಗ್ರಾಮದ ನಿವಾಸಿ ಸಗುಣ ಎಂದು ಹೆಸರಿಸಲಾಗಿದೆ. ಸಗುಣ ಹಾಗೂ ಅವರ ಪತ್ನಿ ಶ್ರೀಮತಿ ಅಂಗಾರು ಅವರು ಸೋಮವಾರ ಮಧ್ಯಾಹ್ನ ಪೆದಮಲೆ ಎಂಬಲ್ಲಿ ಜಯಂತ ಕುಮಾರ್ ಎಂಬವರ ಮನೆಗೆ ಕೆಲಸಕ್ಕೆ ಬಂದು ಜಯಂತರವರ ಮನೆಯ ಸಮೀಪ ಗುಡ್ಡದಲ್ಲಿ ಕೆಲಸ ಮಾಡುತ್ತಿದ್ದಾಗ, ಪೆÇದೆಗಳ ನಡುವೆ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿರುವುದನ್ನು ಸ್ಪರ್ಶಿಸಿದ ಸಗುಣ ಅವರು ವಿದ್ಯುತ್ ಪ್ರವಹಿಸಿ ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಉಪಚರಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಗೆ ಮೆಸ್ಕಾಂ ಇಲಾಖೆಯ ಹಾಗೂ ಮನೆ ಮಾಲಕ ಜಯಂತ ಕುಮಾರ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



























0 comments:
Post a Comment