ಬಂಟ್ವಾಳ, ಡಿಸೆಂಬರ್ 31, 2023 (ಕರಾವಳಿ ಟೈಮ್ಸ್) : ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸವಾರ ಆಸ್ಪತ್ರೆಗೆ ಸಾಗಿಸುತ್ತಿರುವ ವೇಳೆ ಮೃತಪಟ್ಟ ಘಟನೆ ದೇವಸ್ಯಪಡೂರು ಗ್ರಾಮದ ಮರಾಯಿದೊಟ್ಟು ಕ್ರಾಸ್ ಕೊಡ್ಯಮಲೆ ಎಂಬಲ್ಲಿ ಭಾನುವಾರ ಮುಂಜಾನೆ ವೇಳೆ ನಡೆದಿದೆ.
ಮೃತ ಯುವಕನನ್ನು ಸ್ಥಳೀಯ ನಿವಾಸಿ ಗೌತಮ್ (27) ಎಂದು ಹೆಸರಿಸಲಾಗಿದೆ. ಸರಪಾಡಿ ನಿವಾಸಿ ಪ್ರವೀಣ್ ಕುಮಾರ್ ಅವರು ಭಾನುವಾರ ಮುಂಜಾನೆ ಈ ಮಾರ್ಗವಾಗಿ ಬೈಕಿನಲ್ಲಿ ಬರುತ್ತಿರುವ ವೇಳೆ ಬೈಕೊಂದು ಮರಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿರುವುದು ಕಂಡು ಬೈಕ್ ನಿಲ್ಲಿಸಿ ನೋಡಿದಾಗ ಪರಿಚಯದ ಗೌತಮ್ ಎಂಬುದು ಗೊತ್ತಾಗಿ ತಕ್ಷಣ ಮನೆ ಮಂದಿಗೆ ವಿಷಯ ತಲುಪಿಸಿ 108 ಅಂಬ್ಯಲೆನ್ಸ್ ವಾಹನವನ್ನು ಸ್ಥಳಕ್ಕೆ ಕರೆಸಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೆ ಗೌತಮ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗೌತಮ್ ರಂಗಭೂಮಿ ಕಲಾವಿದರಾಗಿದ್ದು ಶನಿವಾರ ರಾತ್ರಿ ಬೆಳುವಾಯಿಯಲ್ಲಿ ನಾಟಕ ಮುಗಿಸಿ ಮನೆಗೆ ಮರಳುತ್ತಿರುವಾಗ ಭಾನುವಾರ ಬೆಳಗ್ಗಿನ ಜಾವ ಮನೆ ಸಮೀಪದಲ್ಲಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗೌತಮ್ ಅವಿವಾಹತರಾಗಿದ್ದು ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಈ ಬಗ್ಗೆ ಪ್ರವೀಣ್ ಕುಮಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment