ಪುತ್ತೂರು, ಜನವರಿ 20, 2024 (ಕರಾವಳಿ ಟೈಮ್ಸ್) : ಚಿನ್ನಾಭರಣ ಖರೀದಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವುಗೈದ ಘಟನೆ ಶುಕ್ರವಾರ ನಡೆದಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪುತ್ತೂರು ಕಸಬಾ ಗ್ರಾಮದ ನಿವಾಸಿ ಜಯರಾಮ ಭಟ್ ಪಿ (52) ಅವರು ದೂರು ನೀಡಿದ್ದು, ಇವರು ಶುಕ್ರವಾರ ಮದ್ಯಾಹ್ನ ಮಂಗಳೂರಿನ ಜುವೆಲ್ಲರಿ ಒಂದರಲ್ಲಿ 1,60,436/- ರೂಪಾಯಿ ಮೌಲ್ಯದ 23.970 ಗ್ರಾಂ ತೂಕದ ಚಿನ್ನದ ಚೈನ್ ಖರೀದಿಸಿ ಬ್ಯಾಗಿನಲ್ಲಿರಿಸಿ ಕೆ ಎಸ್ ಆರ್ ಟಿ ಸಿ ಬಸ್ ಮೂಲಕ ಪುತ್ತೂರಿಗೆ ಪ್ರಯಾಣಿಸುತ್ತಾ, ಬಸ್ ನಿಲ್ದಾಣದಿಂದ ಹೊರಟು ಮಂಗಳೂರು ಬಂಟ್ಸ್ ಹಾಸ್ಟೆಲ್ ಬಳಿ ತಲುಪಿದಾಗ ಬಸ್ ಪ್ರಯಾಣಿಕರಿಂದ ಭರ್ತಿಯಾಗಿದ್ದು, ಜಯರಾಮ್ ಭಟ್ ಅವರ ಪಕ್ಕದಲ್ಲಿ ಕುಳಿತಿದ್ದ ಅಪರಿಚಿತ ಹೆಂಗಸಿನ ಕೈಯಲ್ಲಿದ್ದ ಚಿಲ್ಲರೆ ಹಣವನ್ನು ಕೆಳಗಡೆ ಬೀಳಿಸಿ ಭಟ್ ಅವರ ಗಮನವನ್ನು ಬೇರೆಡೆಗೆ ಸೆಳೆದಿರುತ್ತಾರೆ ಹಾಗೂ ಅಪರಿಚಿತ ಹೆಂಗಸು ಮಗುವಿನ ಜೊತೆ ಭಟ್ ಅವರು ಹಿಡಿದುಕೊಂಡಿದ್ದ ಬ್ಯಾಗಿನ ಮೇಲೆ ಆಯತಪ್ಪಿ ಬಿದ್ದಿರುತ್ತಾರೆ. ಆ ಬಳಿಕ ಮಹಿಳೆ ಇನ್ನೋರ್ವ ಮಹಿಳೆಯೊಂದಿಗೆ ಜ್ಯೋತಿ ಸರ್ಕಲ್ ಬಳಿ ಬಸ್ಸಿನಿಂದ ಇಳಿದು ಹೋಗಿರುತ್ತಾರೆ.
ಜಯರಾಮ್ ಭಟ್ ಅವರು ಪುತ್ತೂರುಗೆ ತಲುಪಿ ತನ್ನ ಮನೆಗೆ ಬಂದು ಬ್ಯಾಗ್ ನೋಡಿದಾಗ ಮಂಗಳೂರಿನಲ್ಲಿ ಖರೀದಿಸಿ ತಂದಿದ್ದ ಚಿನ್ನದ ಸರ ಇದ್ದ ಬಾಕ್ಸ್ ಬ್ಯಾಗ್ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2024 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಹುಡುಕಾಟಕ್ಕೆ ಕಾರ್ಯಪ್ರವೃತ್ತರಾಗಿದ್ದಾರೆ.
0 comments:
Post a Comment