ಇಂದು (ಜನವರಿ 3) ಗುಡ್ಡೆಅಂಗಡಿ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ : ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಅವರಿಂದ ಉದ್ಘಾಟನೆ - Karavali Times ಇಂದು (ಜನವರಿ 3) ಗುಡ್ಡೆಅಂಗಡಿ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ : ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಅವರಿಂದ ಉದ್ಘಾಟನೆ - Karavali Times

728x90

2 January 2024

ಇಂದು (ಜನವರಿ 3) ಗುಡ್ಡೆಅಂಗಡಿ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ : ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಅವರಿಂದ ಉದ್ಘಾಟನೆ

ಈ ಬಾರಿ ರಾತ್ರಿ ಉರೂಸ್ ಕಾರ್ಯಕ್ರಮ : ಜನವರಿ 6 ರಂದು ಶನಿವಾರ ರಾತ್ರಿ ಸಮಾರೋಪ


ಬಂಟ್ವಾಳ, ಜನವರಿ 03, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಸಮೀಪ ಅಂತ್ಯವಿಶ್ರಮಗೊಳ್ಳುತ್ತಿರುವ ಹಝ್ರತ್ ಶೈಖ್ ಮೌಲವಿ (ಖಸಿ) ಅವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 43ನೇ ವರ್ಷದ ಉರೂಸ್ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಇಂದು (ಜನವರಿ 3) ರಾತ್ರಿ ಚಾಲನೆ ನೀಡಲಿದ್ದಾರೆ. ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಹಾಗೂ ಮಸೀದಿ ಗೌರವಾಧ್ಯಕ್ಷ ಹಾಜಿ ಬಿ ಎ ಮುಹಮ್ಮದ್ ನೀಮಾ ಉಪಸ್ಥಿತರಿರಲಿದ್ದು, ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮೆಲ್ಕಾರ್ ಅಧ್ಯಕ್ಷತೆ ವಹಿಸುವರು. ಸ್ಥಳೀಯ ಖತೀಬ್ ಕೆಪಿ ಹಸ್ವೀಫ್ ದಾರಿಮಿ ಕಾಜಿನಡ್ಕ ಮುಖ್ಯ ಭಾಷಣಗೈಯುವರು. 

ಜನವರಿ 4 ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಮಗ್ರಿಬ್ ನಮಾಝ್ ಬಳಿಕ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ನಡೆಯಲಿದ್ದು, ಅಕ್ರಂ ಅಲಿ ತಂಙಳ್ ನೇತೃತ್ವ ವಹಿಸುವರು. ಮಾರಿಪಳ್ಳ ಜುಮಾ ಮಸೀದಿ ಖತೀಬ್ ಇಲ್ಯಾಸ್ ಅರ್ಶದಿ ಮುಖ್ಯ ಭಾಷಣಗೈಯುವರು. 

ಜನವರಿ 5 ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಇಬ್ರಾಹಿಂ ಬಾತಿಷ್ ತಂಙಳ್ ದುವಾ ನೇತೃತ್ವ ನೀಡಲಿದ್ದು, ಅನ್ವರ್ ಅಲಿ ಹುದವಿ ಮುಖ್ಯ ಭಾಷಣಗೈಯುವರು. 

ಜನವರಿ 6 ರಂದು ಶನಿವಾರ ಸುಬ್‍ಹಿ ನಮಾಝ್ ಬಳಿಕ ಎ ಎ ಇಬ್ರಾಹಿಂ ಮುಸ್ಲಿಯಾರ್ ಬೋಗೋಡಿ ಅವರ ನೇತೃತ್ವದಲ್ಲಿ ಖತ್‍ಮುಲ್ ಕುರ್-ಆನ್ ಪಾರಾಯಣ ನಡೆಯಲಿದ್ದು, ಮಗ್ರಿಬ್ ನಮಾಝ್ ಬಳಿಕ ಸಯ್ಯಿದ್ ಹುಸೈನ್ ತಂಙಳ್ ಬಾ-ಅಲವಿ ಕುಕ್ಕಾಜೆ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಲಿದೆ. 

ರಾತ್ರಿ 8.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಯ್ಯಿದ್ ಮುಹಮ್ಮದ್ ಸಫ್ವಾನ್ ತಂಙಳ್ ಕಣ್ಣೂರು ದುವಾಶಿರ್ವಚನಗೈಯುವರು. ಅಶ್ರಫ್ ರಹ್ಮಾನಿ ಚೌಕಿ ಮುಖ್ಯ ಭಾಷಣಗೈಯುವರು. ಮಸೀದಿ ಅದ್ಯಕ್ಷ ಅಬೂಬಕ್ಕರ್ ಮೆಲ್ಕಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ವಕ್ಫ್, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಸತಿ ಸಚಿವ ಬಿ ಝಡ್ ಝಮೀರ್ ಅಹ್ಮದ್, ಪೌರಾಡಳಿತ ಸಚಿವ ರಹೀಂ ಖಾನ್, ಮಾಜಿ ಸಚಿವ ಬಿ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೆಂಗಳೂರು ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಯು ಟಿ ಇಫ್ತಿಕಾರ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಪಿಡಬ್ಲ್ಯುಡಿ ಕಂಟ್ರಾಕ್ಟರ್ ಇಕ್ಬಾಲ್ ಜೆಟಿಟಿ ಮೊದಲಾದವರು ಭಾಗವಹಿಸುವರು. 

ಮಸೀದಿ ಖತೀಬ್ ಕೆ ಪಿ ಹಸ್ವೀಪ್ ದಾರಿಮಿ, ಮಸೀದಿ ಗೌರವಾಧ್ಯಕ್ಷ ಹಾಜಿ ಬಿ ಎ ಮುಹಮ್ಮದ್ ನೀಮಾ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಎಸ್ ಎಂ ನಗರ, ಮದ್ರಸ ಅಧ್ಯಾಪಕರಾದ ಉಸ್ಮಾನ್ ಮುಸ್ಲಿಯಾರ್, ಇಸ್ಮಾಯಿಲ್ ಮುಸ್ಲಿಯಾರ್, ಬಾವಾ ಮುಸ್ಲಿಯಾರ್, ಅಬ್ದುಲ್ ನಾಸಿರ್ ಅಲ್-ಮದನಿ, ರಶೀದ್ ಹನೀಫಿ ಮೊದಲಾದವರು ಉಪಸ್ಥಿತರಿರುವರು. 

ಪ್ರತಿದಿನ ಮಗ್ರಿಬ್ ನಮಾಝ್ ಬಳಿಕ ಕಾರ್ಯಕ್ರಮ ಆರಂಭವಾಗಲಿದ್ದು, ಆರಂಭದಲ್ಲಿ ನೂರುದ್ದೀನ್ ಮದ್ರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಲಿದೆ. ಸಮಾರೋಪ ಸಮಾರಂಭದ ಕೊನೆಯಲ್ಲಿ ಅನ್ನದಾನ ನಡೆಯಲಿದೆ ಎಂದು ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮೆಲ್ಕಾರ್ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಇಂದು (ಜನವರಿ 3) ಗುಡ್ಡೆಅಂಗಡಿ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ : ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಅವರಿಂದ ಉದ್ಘಾಟನೆ Rating: 5 Reviewed By: karavali Times
Scroll to Top