ಪೆರಿಯಶಾಂತಿ : ಹೆದ್ದಾರಿ ಕಾಮಗಾರಿಗೆ ಉಪಯೋಗಿಸುವ ಸೊತ್ತುಗಳ ಕಳವಿಗೆ ಯತ್ನ : ಸಂಸ್ಥೆಯ ಸಿಬ್ಬಂದಿಗಳ ಕಂಡು ಪರಾರಿಯಾದ ಕಳ್ಳರು - Karavali Times ಪೆರಿಯಶಾಂತಿ : ಹೆದ್ದಾರಿ ಕಾಮಗಾರಿಗೆ ಉಪಯೋಗಿಸುವ ಸೊತ್ತುಗಳ ಕಳವಿಗೆ ಯತ್ನ : ಸಂಸ್ಥೆಯ ಸಿಬ್ಬಂದಿಗಳ ಕಂಡು ಪರಾರಿಯಾದ ಕಳ್ಳರು - Karavali Times

728x90

2 January 2024

ಪೆರಿಯಶಾಂತಿ : ಹೆದ್ದಾರಿ ಕಾಮಗಾರಿಗೆ ಉಪಯೋಗಿಸುವ ಸೊತ್ತುಗಳ ಕಳವಿಗೆ ಯತ್ನ : ಸಂಸ್ಥೆಯ ಸಿಬ್ಬಂದಿಗಳ ಕಂಡು ಪರಾರಿಯಾದ ಕಳ್ಳರು

ಕಡಬ, ಜನವರಿ 03, 2024 (ಕರಾವಳಿ ಟೈಮ್ಸ್) : ಹೆದ್ದಾರಿ ಕಾಮಗಾರಿಗೆ ಉಪಯೋಗಿಸುವ ಸ್ಟೀಲ್ ಹಾಗೂ ಸೆಂಟ್ರಿಂಗ್ ವಸ್ತುಗಳನ್ನು ಕಳವುಗೈಯಲು ಬಂದ ಮೂರ್ನಾಲ್ಕು ಮಂದಿ ಕಳ್ಳರು ಕಾಮಗಾರಿ ನಿರ್ವಹಣೆ ಕಂಪೆನಿಯ ಸಿಬ್ಬಂದಿಗಳನ್ನು ಕಂಡು ವಾಹನ ಹಾಗೂ ಲೋಡ್ ಮಾಡಿದ ಸೊತ್ತುಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. 

ಈ ಬಗ್ಗೆ ಎಸ್ ಎಂ ಔತಾಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರೊಜೆಕ್ಟ್ ಮ್ಯಾನೇಜರ್, ಹೈದರಾಬಾದ್ ತೆಲಂಗಾಣ ಮಿಯಾಪುರ ಮದೀನಾಗೋಡಾ ನಿವಾಸಿ ಸಾಯಿರಾಮ್ ಎಂ (51) ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂಸ್ಥೆಯು ಪೆರಿಯಶಾಂತಿಯಿಂದ ಅಡ್ಡಹೊಳೆವರೆಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿದ್ದು, ಜನವರಿ 2 ರಂದು ಬೆಳಗಿನ ಜಾವ ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಸಂಸ್ಥೆಯು ರಸ್ತೆ ನಿರ್ಮಾಣಕ್ಕೆ ಉಪಯೋಗಿಸುವ ಸುಮಾರು 1,10,750/- ರೂಪಾಯಿ ಮೌಲ್ಯದ ಸ್ಟೀಲ್ ಮತ್ತು ಸೆಂಟ್ರಿಂಗ್ ವಸ್ತುಗಳನ್ನು ಸುಮಾರು 3-4 ಜನ ಕಳ್ಳರು ಕಳವು ಮಾಡಿ ಕೆಎ 46-7045 ನೋಂದಣಿ ಸಂಖ್ಯೆಯ ಪಿಕಪ್ ವಾಹನಕ್ಕೆ ಲೋಡ್ ಮಾಡಿ ಕಳವು ಮಾಡಲು ಯತ್ನಿಸಿದ್ದಾರೆ. ರೌಂಡ್ಸ್ ಕರ್ತವ್ಯದಲ್ಲಿದ್ದ ಸಂಸ್ಥೆಯ ಸಿಬ್ಬಂದಿಗಳನ್ನು ನೋಡಿ ಕಳ್ಳರು ವಾಹನ, ಲೋಡ್ ಮಾಡಿದ ಸೊತ್ತುಗಳು, 3 ಮೊಬೈಲ್ ಫೆÇೀನ್ ಗಳನ್ನು ಹಾಗೂ ಕೆಎ21 ಇಎ 4076 ನೋಂದಣಿ ಸಂಖ್ಯೆಯ ಮೋಟಾರು ಸೈಕಲನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ನೀಡಿದ ದೂರಿನಂತೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2024 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪೆರಿಯಶಾಂತಿ : ಹೆದ್ದಾರಿ ಕಾಮಗಾರಿಗೆ ಉಪಯೋಗಿಸುವ ಸೊತ್ತುಗಳ ಕಳವಿಗೆ ಯತ್ನ : ಸಂಸ್ಥೆಯ ಸಿಬ್ಬಂದಿಗಳ ಕಂಡು ಪರಾರಿಯಾದ ಕಳ್ಳರು Rating: 5 Reviewed By: karavali Times
Scroll to Top