ಬಂಟ್ವಾಳ, ಜನವರಿ 11, 2024 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಬಿ ಸಿ ರೋಡು ಸಮೀಪದ ಪೊನ್ನೋಡಿ ಎಂಬಲ್ಲಿ ಅಕ್ರಮ ಮರಳು ಸಾಗಾಟ ಪ್ರಕರಣವನ್ನು ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಎಸ್ಸೈ ಕಲೈಮಾರ್ ನೇತೃತ್ವದ ಪೊಲೀಸರು ಗುರುವಾರ ಬೆಳಗ್ಗಿನ ಜಾವ ಬೇಧಿಸಿದ್ದಾರೆ.
ಪೊನ್ನೋಡಿ ಎಂಬಲ್ಲಿ ಎರಡು ಟಿಪ್ಪರ್ ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಪ್ರಕರಣ ಬೇಧಿಸಿದ ಪೊಲೀಸರು ಲಾರಿ ಚಾಲಕ ಕಂ ಮಾಲಕ ಬಂಟ್ವಾಳ ತಾಲೂಕು ವಿಟ್ಲ ಸಮೀಪದ ಕೇಪು ನಿವಾಸಿ ಮಹಮ್ಮದ್ ಅಫ್ವಾನ್ (26), ಇನ್ನೊಂದು ಲಾರಿ ಚಾಲಕ ಉಳ್ಳಾಲ ತಾಲೂಕು, ಬೋಳಿಯಾರು ಸಮೀಪದ ಫಜೀರು ನಿವಾಸಿ ಬದ್ರು, ಮಾಲಕ ಮೊಹಮ್ಮದ್ ಹನೀಫ್ ಹಾಗೂ ಮರಳು ಒದಗಿಸಿದ ವಳಚ್ಚಿಲ್ ನಿವಾಸಿಗಳಾದ ಸತ್ತಾರ್, ಝಾಹಿದ್ ಹಾಗೂ ಅತಾವುಲ್ಲಾ ಎಂಬವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸದ್ರಿ ಮರಳನ್ನು ವಳಚ್ಚಿಲ್ ಎಂಬಲ್ಲಿಂದ ತುಂಬಿಸಿ ಮಾರಾಟಕ್ಕೆ ಸಾಗಿಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬಂಟ್ವಾಳ ನಗರ ಠಾಣಾ ಪಿಎಸ್ಸೈ ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದು, ಸಜಿಪಮುನ್ನೂರು ಗ್ರಾಮದ ಮಂಜಲ್ಪಾದೆ ಎಂಬಲ್ಲಿ ಮರಳು ಕದ್ದು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಗುರುವಾರ ಬೆಳಗ್ಗಿನ ಜಾವ ಬೇಧಿಸಿದ್ದಾರೆ.
ದಾಳಿ ವೇಳೆ ಟಿಪ್ಪರ್ ಲಾರಿಯಲ್ಲಿ ಮರಳನ್ನು ಕದ್ದು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಲಾರಿ ಚಾಲಕ ಬೋಳಿಯಾರು ನಿವಾಸಿ ಮೊಹಮ್ಮದ್ ಯೂನುಸ್, ಮಾಲಕ ಪಾಣೇಲ ನಿವಾಸಿ ನಝೀರ್ ಹಾಗೂ ಮರಳು ಒದಗಿಸಿದ ಸಜಿಪಮೂಡ ಗ್ರಾಮದ ನಿವಾಸಿಗಳಾದ ಶ್ರೀಕಾಂತ್ ಶೆಟ್ಟಿ ಹಾಗೂ ನವೀನ್ ಎಂಬವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment