ಬೆಳ್ತಂಗಡಿ, ಫೆಬ್ರವರಿ 02, 2024 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಅಟೋ ರಿಕ್ಷಾ ಚಾಲಕ ಹಾಗೂ ರಿಕ್ಷಾದಲ್ಲಿ ಮಗು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಲಾಯಿಲ ಅಪೂರ್ವ ಹೋಟೆಲ್ ಬಳಿ ಗುರುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಗಾಯಗೊಂಡವರನ್ನು ಅಟೋ ರಿಕ್ಷಾ ಚಾಲಕ ಬೆಳ್ತಂಡಗಿ ಕಸಬಾ ಗ್ರಾಮ ನಿವಾಸಿ ಆರಿಸ್ (35) ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಗು ಫಾತಿಮಾ ನಹ್ಲಾ ಎಂದು ಹೆಸರಿಸಲಾಗಿದೆ. ಅಟೋ ಚಾಲಕ ಆರಿಸ್ ಅವರು ಅಟೋ ರಿಕ್ಷಾದಲ್ಲಿ ಬಾಡಿಗೆಗೆ ಪ್ರಯಾಣಿಕರಾದ ಅನ್ನತ್, ಸನ್ವಝ್ ಬಾನು, ಸಫಿಯಾ, ಮಗು ಮಹಮ್ಮದ್ ಶಾಝ್, ಮಗು ಫಾತಿಮಾ ನಹ್ಲಾ ಎಂಬವರನ್ನು ಸಹ ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಲಾಯಿಲ ಗ್ರಾಮದ, ಲಾಯಿಲ ಅಪೂರ್ವ ಹೋಟೇಲ್ ಬಳಿ ತಲುಪುತ್ತಿದ್ದಂತೆ, ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಆಟೋ ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿದೆ. ಗಾಯಾಳುಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment