ಬಂಟ್ವಾಳ, ಫೆಬ್ರವರಿ 02, 2024 (ಕರಾವಳಿ ಟೈಮ್ಸ್) : ಷೇರ್ ಟ್ರೆಂಡಿಂಗಿಗೆ ಹಣ ಹೂಡಿಕೆ ಮಾಡಿ ಲಾಭ ಗಳಿಸುವಂತೆ ಅಪರಿಚಿತರು ವಾಟ್ಸಪ್ ಮೂಲಕ ಕಳಿಸಿದ ಮೆಸೇಜ್ ನಂಬಿದ ವ್ಯಕ್ತಿಯೋರ್ವರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಬಂಟ್ವಾಳದಿಂದ ವರದಿಯಾಗಿದೆ.
ಬಿ ಮೂಡ ಗ್ರಾಮದ ಜೋಡುಮಾರ್ಗ ನಿವಾಸಿ ಸುಬ್ರಾಯ ರಾಮ ಮಡಿವಾಳ (74) ಎಂಬªರೇ ವಾಟ್ಸಪ್ ಸಂದೇಶ ನಂಬಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ವ್ಯಕ್ತಿ. ಸುಬ್ರಾಯ ಮಡಿವಾಳ ಅವರ ಮೊಬೈಲಿಗೆ ಕಳೆದ ನವೆಂಬರ್ ತಿಂಗಳಿನಲ್ಲಿ ಷೇರ್ ಟ್ರೇಡಿಂಗಿಗಾಗಿ ಹೂಡಿಕೆ ಮಾಡಿ ಲಾಭ ಪಡೆಯುವಂತೆ ಅಪರಿಚಿತ ವ್ಯಕ್ತಿಗಳು ವಾಟ್ಸಪ್ ಮೂಲಕ ಮೇಸೆಜ್ ಕಳಿಸಿದ್ದು, ಸದ್ರಿ ಅಪರಿಚಿತ ಆರೋಪಿಗಳು ನೀಡಿದ ಸೂಚನೆಗಳನ್ನು ಅನುಸರಿಸಿ, ಜನವರಿ 9 ರಿಂದ ಈವರೆಗೆ ಹಂತ ಹಂತವಾಗಿ ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 18,92,200/- ರೂಪಾಯಿಗಳನ್ನು ಪಾವತಿಸಿದ್ದಾರೆ.
ಆದರೆ ಆರೋಪಿಗಳು ಯಾವುದೇ ಲಾಭಾಂಶ ಮತ್ತು ಪಾವತಿಸಿದ ಹಣವನ್ನೂ ನೀಡದೆ ಸುಬ್ರಾಯ ಮಡಿವಾಳ ಅವರಿಗೆ ವಂಚಿಸಿರುತ್ತಾರೆ. ಈ ಬಗ್ಗೆ ಮಡಿವಾಳ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment