ಬೆಳ್ತಂಗಡಿ, ಫೆಬ್ರವರಿ 14, 2024 (ಕರಾವಳಿ ಟೈಮ್ಸ್) : ಆನ್ ಲೈನ್ ವಂಚಕರ ಸಂದೇಶ ನಂಬಿ ಹಣ ಕಳೆದುಕೊಳ್ಳುವ ಪ್ರಕರಣ ಮುಂದುವರಿದ್ದು, ವಿದ್ಯಾವಂತರೇ ಈ ವಂಚನೆಗೆ ಬಲಿ ಬೀಳುತ್ತಿದ್ದಾರೆ. ಇದೀಗ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಆನ್ ಲೈನ್ ವಂಚನಾ ಪ್ರಕರಣ ನಡೆದಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ನುಪೈಲಾ ಕೆ ಐ (26) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅವರಿಗೆ ಫೆಬ್ರವರಿ 6 ರಂದು ಟೆಲಿಗ್ರಾಮ್ ಆಪ್ ಮೂಲಕ, ಡಾಟ ರೇಡ್ ಎಂಬ ಕಂಪೆನಿಯಿಂದ ಬಂದ ಲಿಂಕ್ ಮೂಲಕ ಆನ್ ಲೈನ್ ಪ್ರೊಡಕ್ಟ್ ಗೆ ರೇಟಿಂಗ್ ಮಾಡುವ ಕೆಲಸ ನಿರ್ವಹಿಸಿದ್ದು, ಈ ವೇಳೆ 900/- ರೂಪಾಯಿಯನ್ನು ನುಪೈಲಾ ಅವರ ಖಾತೆಗೆ ಜಮೆ ಮಾಡಿರುತ್ತಾರೆ. ಆ ಬಳಿಕ ಅದೇ ಸಂಸ್ಥೆಯವರೆಂದು ಪರಿಚಯಿಸಿಕೊಂಡ ಅಪರಿಚಿತ ಆರೋಪಿ, ಫೆ 8 ರಿಂದ 12 ರ ಅವಧಿಯಲ್ಲಿ, ವಿವಿಧ ಖಾತೆಗಳಿಗೆ ನುಫೈಲಾ ಅವರ ಖಾತೆಯಿಂದ ಆನ್ ಲೈನ್ ಮೂಲಕ ಒಟ್ಟು 6,95,148/- ರೂಪಾಯಿಗಳನ್ನು ವರ್ಗಾಯಿಸಿಕೊಂಡಿದ್ದಾರೆ.
ವರ್ಗಾಯಿಸಿಕೊಂಡ ಹಣವನ್ನು ಮರುಪಾವತಿಸದೇ ಆನ್ ಲೈನ್ ಮೂಲಕ ವಂಚಿಸಿರುವುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2024 ಕಲಂ 419, 420 ಐಪಿಸಿ ಹಾಗೂ 66 (ಡಿ) ಐಟಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment