ಸುಳ್ಯ : ಅಟೋ ರಿಕ್ಷಾ ತಡೆದು ವ್ಯಕ್ತಿಗೆ ತಂಡದಿಂದ ಹಲ್ಲೆ, ಬೆದರಿಕೆ - Karavali Times ಸುಳ್ಯ : ಅಟೋ ರಿಕ್ಷಾ ತಡೆದು ವ್ಯಕ್ತಿಗೆ ತಂಡದಿಂದ ಹಲ್ಲೆ, ಬೆದರಿಕೆ - Karavali Times

728x90

14 February 2024

ಸುಳ್ಯ : ಅಟೋ ರಿಕ್ಷಾ ತಡೆದು ವ್ಯಕ್ತಿಗೆ ತಂಡದಿಂದ ಹಲ್ಲೆ, ಬೆದರಿಕೆ

ಸುಳ್ಯ, ಫೆಬ್ರವರಿ 14, 2024 (ಕರಾವಳಿ ಟೈಮ್ಸ್) : ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ತಡೆದು ಮೂವರ ತಂಡವೊಂದು ಹಲ್ಲೆ ನಡೆಸಿದ ಜೀವಬೆದರಿಕೆ ಒಡ್ಡಿದ ಘಟನೆ ಅಜ್ಜಾವರ ಗ್ರಾಮದ ಕಾಟಿಪಳ್ಳ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. 

ಹಲ್ಲೆಗೊಳಗಾದ ವ್ಯಕ್ತಿಯನ್ನು ಸುಳ್ಯ-ಅಮರಮುಡ್ನೂರು ನಿವಾಸಿ ಅಜಿತ್ (21) ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ಅಜ್ಜಾವರ ನಿವಾಸಿಗಳಾದ ದಿನೇಶ್ (45), ಪುರುಷೋತ್ತಮ (32) ಹಾಗೂ ಸನತ್ (25) ಎಂದು ಗುರುತಿಸಲಾಗಿದೆ. 

ಅಜಿತ್ ಅವರು ಮಂಗಳವಾರ ಸಂಜೆ ಜಯರಾಮ ಎಂಬವರ ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಜ್ಜಾವರ-ಸುಳ್ಯ ಮುಖ್ಯ ರಸ್ತೆಯ ಕಾಟಿಪಳ್ಳ ಎಂಬಲ್ಲಿ ತಲುಪಿದಾಗ ಆರೋಪಿಗಳು ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ, ಅಜಿತ್ ಅವರನ್ನು ಆಟೋ ರಿಕ್ಷಾದಿಂದ ಹೊರಗೆಳೆದು ಹಲ್ಲೆ ನಡೆಸಿರುತ್ತಾರೆ. ಈ ವೇಳೆ ಆಟೋ ಚಾಲಕ ಜಯರಾಮ್ ಅವರು ಅಜಿತ್ ಅವರಿಗೆ ಹೊಡೆಯುತ್ತಿರುವುದನ್ನು ತಡೆಯಲು ಪ್ರಯತ್ನಿಸಿದಾಗ, ಅವರನ್ನೂ ಬೆದರಿಸಿರುತ್ತಾರೆ. ಬಳಿಕ ಆರೋಪಿಗಳು ಅಜಿತ್ ಅವರಿಗೆ ಜೀವ ಬೆದರಿಕೆ ಒಡ್ಡಿ ತೆರಳಿರುತ್ತಾರೆ. 

ಈ ಬಗ್ಗೆ ಗಾಯಾಳು ಅಜಿತ್ ನೀಡಿದ ದೂರಿನಂತೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2024 ಕಲಂ 341, 323, 324, 506 ಆರ್/ಡಬ್ಲ್ಯು 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ : ಅಟೋ ರಿಕ್ಷಾ ತಡೆದು ವ್ಯಕ್ತಿಗೆ ತಂಡದಿಂದ ಹಲ್ಲೆ, ಬೆದರಿಕೆ Rating: 5 Reviewed By: karavali Times
Scroll to Top