ಮದ್ದೂರು : ಫೆಬ್ರವರಿ 18 ರಂದು ಖ್ವಾಜಾ ಕೀ ಛಟ್ಟಿ ಹಾಗೂ ಸಂದಲ್ ಶರೀಫ್ ಕಾರ್ಯಕ್ರಮ - Karavali Times ಮದ್ದೂರು : ಫೆಬ್ರವರಿ 18 ರಂದು ಖ್ವಾಜಾ ಕೀ ಛಟ್ಟಿ ಹಾಗೂ ಸಂದಲ್ ಶರೀಫ್ ಕಾರ್ಯಕ್ರಮ - Karavali Times

728x90

15 February 2024

ಮದ್ದೂರು : ಫೆಬ್ರವರಿ 18 ರಂದು ಖ್ವಾಜಾ ಕೀ ಛಟ್ಟಿ ಹಾಗೂ ಸಂದಲ್ ಶರೀಫ್ ಕಾರ್ಯಕ್ರಮ

ಮಂಡ್ಯ, ಫೆಬ್ರವರಿ 15, 2024 (ಕರಾವಳಿ ಟೈಮ್ಸ್) : ಜಿಲ್ಲೆಯ ಮದ್ದೂರು, ಕೆಸ್ತೂರು-ಅಂಕನಹಳ್ಳಿ ಇಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಖ್ವಾಜಾ ಫೈಝ್ ಅಲಿ ಶಾ ಚಿಶ್ತಿ (ರ) ಹಾಗೂ ಹಝ್ರತ್ ಖ್ವಾಜಾ ಶಬೀರ್ ಅಲಿ ಶಾ ಚಿಶ್ತಿ (ರ) ಅವರ ಹೆಸರಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಸಂದಲ್ ಶರೀಫ್ ಹಾಗೂ ಹಝ್ರತ್ ಖ್ವಾಜಾ ಗರೀಬ್ ನವಾಝ್ (ರ) ಅಜ್ಮೀರ್ ಅವರ ಹೆಸರಿನಲ್ಲಿ ಖ್ವಾಜಾ ಕೀ ಛಟ್ಟಿ ಕಾರ್ಯಕ್ರಮವು ಫೆಬ್ರವರಿ 18 ರಂದು ಭಾನುವಾರ ನಡೆಯಲಿದೆ. 

ಸಂಜೆ 6.30ಕ್ಕೆ ಛಟ್ಟಿ ಶರೀಫ್, 7.30ಕ್ಕೆ ಸಂದಲ್ ಶರೀಫ್ ಹಾಗೂ ರಾತ್ರಿ 8ಕ್ಕೆ ಸಾರ್ವಜನಿಕ ಅನ್ನದಾನ ಕಾರ್ಯಕ್ರಮಗಳು ನಡೆಯಲಿದೆ. ಖ್ವಾಜಾ ಬಲ್ಹರ್ ಅಲಿ ಶಾ ಚಿಶ್ತಿ ಅವರ ನೇತೃತ್ವದಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸೂಫಿ ಸಂತರು, ಉಲಮಾ-ಉಮರಾ ನೇತಾರರು, ಶರಣ ಸಂತರು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಖ್ವಾಜಾ ಅಝೀಂ ಅಲಿ ಶಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮದ್ದೂರು : ಫೆಬ್ರವರಿ 18 ರಂದು ಖ್ವಾಜಾ ಕೀ ಛಟ್ಟಿ ಹಾಗೂ ಸಂದಲ್ ಶರೀಫ್ ಕಾರ್ಯಕ್ರಮ Rating: 5 Reviewed By: karavali Times
Scroll to Top