ಬೆಳ್ತಂಗಡಿ, ಫೆಬ್ರವರಿ 24, 2024 (ಕರಾವಳಿ ಟೈಮ್ಸ್) : ಈಚರ್ ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬೆಳ್ತಂಗಡಿ ತಾಲೂಕು, ಸೋಣಂದೂರು ಗ್ರಾಮದ ಪಣಕಜೆ ಬಸ್ ನಿಲ್ದಾಣದ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ.
ಗಾಯಗೊಂಡ ಬೈಕ್ ಸವಾರನನ್ನು ಹರ್ಷರಾಜ್ ಎಂದು ಹೆಸರಿಸಲಾಗಿದೆ. ಅಶೋಕ್ ಪೂಜಾರಿ ಎಂಬವರು ಚಲಾಯಿಸಿಕೊಂಡು ಬಂದ ಈಚರ್ ಟಿಪ್ಪರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡ ಹರ್ಷರಾಜ್ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಬಗ್ಗೆ ಕುಕ್ಕಳ ಗ್ರಾಮದ ನಿವಾಸಿ ಪಿ ಮಹಮ್ಮದ್ ಹನೀಫ್ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment