ಇರಾ : ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ಸಹಸವಾರಿಣಿಗೆ ಗಾಯ - Karavali Times ಇರಾ : ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ಸಹಸವಾರಿಣಿಗೆ ಗಾಯ - Karavali Times

728x90

24 February 2024

ಇರಾ : ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ಸಹಸವಾರಿಣಿಗೆ ಗಾಯ

ಬಂಟ್ವಾಳ, ಫೆಬ್ರವರಿ 24, 2024 (ಕರಾವಳಿ ಟೈಮ್ಸ್) : ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ಸಹಸವಾರಿಣಿ ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಇರಾ ಗ್ರಾಮದಲ್ಲಿ ನಡೆದಿದೆ. 

ಗಾಯಗೊಂಡ ಸ್ಕೂಟರ್ ಸಹಸವಾರಿಣಿಯನ್ನು ಬೆಳ್ತಂಗಡಿ ತಾಲೂಕು, ಮಚ್ಚಿನ ಗ್ರಾಮದ ನಿವಾಸಿ ಮುಹಮ್ಮದ್ ರಿಯಾಝ್ ಎಂಬವರ ಪತ್ನಿ ಸಾಜಿದಾ ಬಾನು ಎಂದು ಹೆಸರಿಸಲಾಗಿದ. 

ಮುಹಮ್ಮದ್ ರಿಯಾಜ್ ಅವರು ತನ್ನ ಹೆಂಡತಿ ಸಾಜಿದಾ ಬಾನು ಹಾಗೂ ಮಗುವನ್ನು ಕುಳ್ಳಿರಿಸಿಕೊಂಡು ಪ್ರಯಾಣಿಸುತ್ತಿದ್ದ ವೇಳೆ ಅಬ್ದುಲ್ ನಾಸಿರ್ ಎಂಬವರು ಚಲಾಯಿಸಿಕೊಂಡು ಬಂದ ಟಿಪ್ಪರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದ ತೀವ್ರತೆಗೆ ಸಹಸವಾರಿಣಿ ಸಾಜಿದಾ ಬಾನು ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಗಿದೆ. ಸವಾರ ರಿಯಾಝ್ ಹಾಗೂ ಮಗು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. 

ಟಿಪ್ಪರ್ ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಇರಾ : ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ಸಹಸವಾರಿಣಿಗೆ ಗಾಯ Rating: 5 Reviewed By: karavali Times
Scroll to Top