5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ : ಪರೀಕ್ಷೆಗೆ ದಿನಾಂಕ ನಿಗದಿ ಪಡಿಸಿ ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಇಲಾಖೆ, ಸೋಮವಾರದಿಂದ (ಮಾ 25) ಪರೀಕ್ಷೆ ಆರಂಭ - Karavali Times 5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ : ಪರೀಕ್ಷೆಗೆ ದಿನಾಂಕ ನಿಗದಿ ಪಡಿಸಿ ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಇಲಾಖೆ, ಸೋಮವಾರದಿಂದ (ಮಾ 25) ಪರೀಕ್ಷೆ ಆರಂಭ - Karavali Times

728x90

23 March 2024

5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ : ಪರೀಕ್ಷೆಗೆ ದಿನಾಂಕ ನಿಗದಿ ಪಡಿಸಿ ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಇಲಾಖೆ, ಸೋಮವಾರದಿಂದ (ಮಾ 25) ಪರೀಕ್ಷೆ ಆರಂಭ

ಬೆಂಗಳೂರು, ಮಾರ್ಚ್ 23, 2024 (ಕರಾವಳಿ ಟೈಮ್ಸ್) : 5, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ರಾಜ್ಯ ಸರಕಾರದ ನಿರ್ಧಾರವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಪರೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಶುಕ್ರವಾರ ಅನುಮತಿ ನೀಡಿದೆ.

ಮಾರ್ಚ್ 25 ರಿಂದ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಅದೇ ದಿನಾಂಕಗಳಂದು ಈ ತರಗತಿಗಳ ಬೋರ್ಡ್ ಪರೀಕ್ಷೆ ಕೂಡಾ ನಡೆಯಲಿದೆ. 5,8 ಹಾಗೂ 9ನೇ ತರಗತಿ ಪಬ್ಲಿಕ್ ಪರೀಕ್ಷೆ ಕುರಿತು ಹಲವು ಸುತ್ತಿನ ಕಾನೂನು ಸಮರದ ಬಳಿಕ ಪಬ್ಲಿಕ್ ಪರೀಕ್ಷೆ ಮುಂದುವರಿಸಲು ರಾಜ್ಯ ಹೈಕೋರ್ಟ್ ಶುಕ್ರವಾರ ಬೆಳಗ್ಗೆ ಗ್ರೀನ್ ಸಿಗ್ನಲ್ ನೀಡಿತ್ತು. ಈ ಹಿನ್ನಲೆಯಲ್ಲಿ ಸೋಮವಾರದಿಂದ (ಮಾ 25) ಪರೀಕ್ಷೆ ಮುಂದುವರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿ ವೇಳಾಪಟ್ಟಿಯನ್ನೂ ಪ್ರಕಟಿಸಿದೆ.

ಮಾರ್ಚ್ 25 ರಿಂದ ಪರೀಕ್ಷೆ ಆರಂಭವಾಗಲಿದ್ದು, ಮಾರ್ಚ್ 28ರವರೆಗೆ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಆದೇಶ ತಿಳಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ದಿನ ಮಧ್ಯಾಹ್ನ 2.30ರಿಂದ ಪರೀಕ್ಷೆ ನಡೆಯಲಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ಇಲ್ಲದ ದಿನ ಬೆಳ್ಳಗೆ 10 ಗಂಟೆಗೆ ಪರೀಕ್ಷೆ ಆರಂಭವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಂಬರುವ ಶೈಕ್ಷಣಿಕ ವರ್ಷಗಳಿಗೆ ಇದೇ ರೀತಿಯ ಮೌಲ್ಯಮಾಪನಗಳನ್ನು ಆದೇಶಿಸುವ ಮೊದಲು ಮಧ್ಯಸ್ಥಗಾರರನ್ನು ಸಂಪರ್ಕಿಸುವಂತೆ ವಿಭಾಗೀಯ ಪೀಠವು ಸರಕಾರಕ್ಕೆ ನಿರ್ದೇಶನ ನೀಡಿದೆ. ಕರ್ನಾಟಕದ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ ಮತ್ತು ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆಯನ್ನು ಪ್ರತಿನಿಧಿಸುವ ವಕೀಲ ಕೆ.ವಿ. ಧನಂಜಯ ಅವರು ಮಾರ್ಚ್ 6 ರಂದು ಏಕ ಸದಸ್ಯ ಪೀಠದ ನ್ಯಾಯಾಧೀಶರು ನೀಡಿದ ಆದೇಶವನ್ನು ಸಮರ್ಥಿಸಿಕೊಂಡಿದ್ದರು.

ಸರಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಪ್ರತಿನಿಧಿಸಿದ ವಕೀಲ ಪ್ರಿತ್ವೀಶ್ ಮಿರ್ಲೆ, ವಿದ್ಯಾರ್ಥಿಗಳು ಒಂದೇ ಪಠ್ಯಕ್ರಮವನ್ನು ಅಧ್ಯಯನ ಮಾಡುವಾಗ ಮತ್ತು ಶಾಲೆಗಳು ರಾಜ್ಯ ಮಂಡಳಿಗೆ ಸಂಯೋಜಿತವಾಗಿರುವಾಗ ಖಾಸಗಿ ಮತ್ತು ಸರಕಾರಿ ಶಾಲೆಗಳಿಗೆ ವಿವಿಧ ಮೌಲ್ಯಮಾಪನಗಳು ಆರ್ಟಿಕಲ್ 14 ಅನ್ನು ಉಲ್ಲಂಘಿಸಿವೆ ಎಂದು ವಾದಿಸಿದರು.


ಪರೀಕ್ಷಾ ವೇಳಾಪಟ್ಟಿ ಈ ರೀತಿ ಇದೆ : 

5ನೇ ತರಗತಿ

ಮಾರ್ಚ್ 25 : ಪರಿಸರ ಅಧ್ಯಯನ

ಮಾರ್ಚ್ 26 : ಗಣಿತ


8ನೇ ತರಗತಿ

ಮಾರ್ಚ್ 25 : ತೃತೀಯ ಭಾಷೆ

ಮಾರ್ಚ್ 26 : ಗಣಿತ

ಮಾರ್ಚ್ 27 : ವಿಜ್ಞಾನ

ಮಾರ್ಚ್ 28 : ಸಮಾಜ ವಿಜ್ಞಾನ


9ನೇ ತರಗತಿ

ಮಾರ್ಚ್ 25 : ತೃತೀಯ ಭಾಷೆ

ಮಾರ್ಚ್ 26 : ಗಣಿತ

ಮಾರ್ಚ್ 27 : ವಿಜ್ಞಾನ

ಮಾರ್ಚ್ 28 : ಸಮಾಜ ವಿಜ್ಞಾನ

  • Blogger Comments
  • Facebook Comments

0 comments:

Post a Comment

Item Reviewed: 5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ : ಪರೀಕ್ಷೆಗೆ ದಿನಾಂಕ ನಿಗದಿ ಪಡಿಸಿ ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಇಲಾಖೆ, ಸೋಮವಾರದಿಂದ (ಮಾ 25) ಪರೀಕ್ಷೆ ಆರಂಭ Rating: 5 Reviewed By: karavali Times
Scroll to Top