ಬೆಳ್ತಂಗಡಿ : ಪಿಕಪ್ ವಾಹನ ಡಿಕ್ಕಿ ಹೊಡೆದು ಕಾರು ಪ್ರಯಾಣಿಕರಿಬ್ಬರು ಆಸ್ಪತ್ರೆಗೆ - Karavali Times ಬೆಳ್ತಂಗಡಿ : ಪಿಕಪ್ ವಾಹನ ಡಿಕ್ಕಿ ಹೊಡೆದು ಕಾರು ಪ್ರಯಾಣಿಕರಿಬ್ಬರು ಆಸ್ಪತ್ರೆಗೆ - Karavali Times

728x90

6 March 2024

ಬೆಳ್ತಂಗಡಿ : ಪಿಕಪ್ ವಾಹನ ಡಿಕ್ಕಿ ಹೊಡೆದು ಕಾರು ಪ್ರಯಾಣಿಕರಿಬ್ಬರು ಆಸ್ಪತ್ರೆಗೆ

ಬೆಳ್ತಂಗಡಿ, ಮಾರ್ಚ್ 06, 2024 (ಕರಾವಳಿ ಟೈಮ್ಸ್) : ಪಿಕಪ್ ವಾಹನ ಡಿಕ್ಕಿ ಹೊಡೆದು ಕಾರು ಪ್ರಯಾಣಿಕರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮರೋಡಿ ಗ್ರಾಮದ ಕುಂಜೋಡಿ ಎಂಬಲ್ಲಿ ಮಂಗಳವಾರ ರಾತ್ರಿ ವೇಳೆ ನಡೆದಿದೆ. 

ಗಾಯಗೊಂಡವರನ್ನು ಕಾರು ಚಾಲಕ, ಮೂಡಬಿದ್ರೆ ಸಮೀಪದ ಮಾರ್ಪಾಡಿ-ಗಾಂಧಿನಗರ ನಿವಾಸಿ ವಿಜೇಶ್ (27) ಹಾಗೂ ಆತನ ಸ್ನೇಹಿತ ಶಶಾಂಕ್ ಎಂದು ಹೆಸರಿಸಲಾಗಿದೆ. ಇವರು ಶಿಫ್ಟ್ ಕಾರಿನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಪಿಕಪ್ ವಾಹನ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಕಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದಾಗಿ ಎರಡೂ ವಾಹನಗಳು ಜಖಂಗೊಂಡಿದ್ದು, ಗಾಯಾಳುಗಳು ಮೂಡಬಿದ್ರೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ಪಿಕಪ್ ವಾಹನ ಡಿಕ್ಕಿ ಹೊಡೆದು ಕಾರು ಪ್ರಯಾಣಿಕರಿಬ್ಬರು ಆಸ್ಪತ್ರೆಗೆ Rating: 5 Reviewed By: karavali Times
Scroll to Top