ಬೆಳ್ತಂಗಡಿ, ಮಾರ್ಚ್ 28, 2024 (ಕರಾವಳಿ ಟೈಮ್ಸ್) : ತೋಟದಲ್ಲಿ ಮೇಯಲು ಕಟ್ಟಿ ಹಾಕಿದ್ದ ದನ ಕಳವಾಗಿರುವ ಘಟನೆ ಕೊಕ್ಕಡ ಗ್ರಾಮದ ಶಬರಾಡಿ ಎಂಬಲ್ಲಿ ಮಾ 25 ರಂದು ನಡೆದಿದೆ.
ಇಲ್ಲಿನ ನಿವಾಸಿ ಶಿವಪ್ರಸಾದ್ (43) ಅವರು ಮಾರ್ಚ್ 25 ರಂದು ತನ್ನ ತೋಟದಲ್ಲಿ ಮೇಯಲೆಂದು ದನವನ್ನು ಕಟ್ಟಿ ಹಾಕಿದ್ದು, ಬಳಿಕ ಮದ್ಯಾಹ್ನ ತೋಟಕ್ಕೆ ಬಂದು ನೋಡುವಾಗ ದನ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾಗಿರುವ ದನದ ಅಂದಾಜು ಮೌಲ್ಯ 20 ಸಾವಿರ ರೂಪಾಯಿ ಆಗಿದೆ. ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















0 comments:
Post a Comment