ಅಂಚೆ ಇಲಾಖೆ ಪುತ್ತೂರು ಉಪವಿಭಾಗದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಜನಸಂಪರ್ಕ ಅಭಿಯಾನ - Karavali Times ಅಂಚೆ ಇಲಾಖೆ ಪುತ್ತೂರು ಉಪವಿಭಾಗದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಜನಸಂಪರ್ಕ ಅಭಿಯಾನ - Karavali Times

728x90

8 March 2024

ಅಂಚೆ ಇಲಾಖೆ ಪುತ್ತೂರು ಉಪವಿಭಾಗದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಜನಸಂಪರ್ಕ ಅಭಿಯಾನ

ಪುತ್ತೂರು, ಮಾರ್ಚ್ 08, 2024 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಲ್ಲಿ ಉಳಿತಾಯ ಮನೋಭಾವನೆಯನ್ನು ಪೆÇ್ರೀತ್ಸಾಹಿಸುವ ಉದ್ದೇಶದಿಂದ, ಪುತ್ತೂರು ಮುಳಿಯ ಜ್ಯುವೆಲ್ಲರ್ಸ್ ಸಹಯೋಗದೊಂದಿಗೆ ಜನ ಸಂಪರ್ಕ ಅಭಿಯಾನವನ್ನು ಶುಕ್ರವಾರ ಮುಳಿಯ ಟ್ರೈನಿಂಗ್ ಸಭಾಂಗಣದಲ್ಲಿ ನಡೆಯಿತು. 

ಮುಳಿಯ ಜ್ಯುವೆಲ್ಲರ್ಸ್ ನಿರ್ದೇಶಕಿ ಶ್ರೀಮತಿ ಕೃಷ್ಣವೇಣಿ ಪ್ರಸಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಳಿಯ ಜ್ಯುವೆಲ್ಲರ್ಸ್ ನಿರ್ದೇಶಕರಾದ ಅಶ್ವಿನಿ ಕೃಷ್ಣ, ಅಂಚೆ ಇಲಾಖೆ ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜಿ ಹರೀಶ್, ಉಪ ಅಂಚೆ ಅಧೀಕ್ಷಕಿ ಉಷಾ ಕೆ ಆರ್, ಸಹಾಯ ಅಧೀಕ್ಷಕ ಗಣಪತಿ ಮರಡಿ,  ಪುತ್ತೂರು ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ತೀರ್ಥಪ್ರಸಾದ್ ಎಸ್, ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಕುಮಾರಿ ಸವಿತಾ ಭಾಗವಹಿಸಿದ್ದರು. 

ಮುಳಿಯ ಜ್ಯುವೆಲ್ಲರ್ಸ್ ಇದರ ನೂರಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳು ಅಂಚೆ ಇಲಾಖೆಯ ವಿವಿಧ ಸೇವೆಗಳ ಖಾತೆಗಳನ್ನು ತೆರೆಯುವ ಮೂಲಕ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. 

ಇದೇ ವೇಳೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಭಾಗವಾಗಿ ಹದಿನೈದು ಮಂದಿ ಪುತ್ತೂರು ನಗರ ಸಭಾ ವ್ಯಾಪ್ತಿಯ ಮಹಿಳಾ ಸ್ವಚ್ಛತಾ ಕಾರ್ಮಿಕರನ್ನು ಗುರುತಿಸಿ ಗೌರವಿಸಲಾಯಿತು. 

ಪುತ್ತೂರು ಅಂಚೆ ವಿಭಾಗದ ಮಾರುಕಟ್ಟೆ ಅಧಿಕಾರಿ ಗುರುಪ್ರಸಾದ್ ಕೆ ಎಸ್ ಕಾರ್ಯಕ್ರಮ ನಿರೂಪಿಸಿದರು. ಮುಳಿಯ ಜ್ಯುವೆಲ್ಲರ್ಸ್ ಮಾರ್ಕೆಟಿಂಗ್ ಎಕ್ಸೆಕ್ಯೂಟಿವ್ ಸಂಜೀವ ವಂದಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಅಂಚೆ ಇಲಾಖೆ ಪುತ್ತೂರು ಉಪವಿಭಾಗದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಜನಸಂಪರ್ಕ ಅಭಿಯಾನ Rating: 5 Reviewed By: karavali Times
Scroll to Top