ಸುಳ್ಯ : ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶಗೈದು ಮಾಲಿಕನ ಎದುರಲ್ಲೇ ಸೊತ್ತು ಕಳವುಗೈದ ಆರೋಪಿಗಳು - Karavali Times ಸುಳ್ಯ : ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶಗೈದು ಮಾಲಿಕನ ಎದುರಲ್ಲೇ ಸೊತ್ತು ಕಳವುಗೈದ ಆರೋಪಿಗಳು - Karavali Times

728x90

2 March 2024

ಸುಳ್ಯ : ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶಗೈದು ಮಾಲಿಕನ ಎದುರಲ್ಲೇ ಸೊತ್ತು ಕಳವುಗೈದ ಆರೋಪಿಗಳು

ಸುಳ್ಯ, ಮಾರ್ಚ್ 02, 2024 (ಕರಾವಳಿ ಟೈಮ್ಸ್) : ತೋಟಕ್ಕೆ ಅಕ್ರಮ ಪ್ರವೇಶಗೈದ ಇಬ್ಬರು ಆರೋಪಿಗಳು ಮಾಲಿಕ ಸಮ್ಮುಖದಲ್ಲೇ ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವುಗೈದು ಪರಾರಿಯಾದ ಘಟನೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. 

ಕಳವು ಆರೋಪಿಗಳನ್ನು ಪ್ರಮೋದ್ ಹಾಗೂ ಅಪೂರ್ವ ಎಂದು ಗುರುತಿಸಲಾಗಿದೆ. ಸ್ಥಳೀಯ ನಿವಾಸಿ ಚಂದ್ರಶೇಖರ ಎ ಅವರು ತನ್ನ ಐವರ್ನಾಡು ಗ್ರಾಮದಲ್ಲಿನ ಅಡಿಕೆ ತೋಟಕ್ಕೆ ಶುಕ್ರವಾರ ಪೂರ್ವಾಹ್ನ ನೀರು ಹಾಯಿಸಲು ತೆರಳಿದ್ದ ವೇಳೆ ಆರೋಪಿಗಳಾದ ಪ್ರಮೋದ್ ಮತ್ತು ಅಪೂರ್ವ ಎಂಬವರು ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಸುಮಾರು 100 ಮೀಟರ್ ಉದ್ದದ ವಿದ್ಯುತ್ ಕೇಬಲ್ ಗಳು ಮತ್ತು 1 ಅಲ್ಯೂಮಿನಿಯಂ ಏಣಿ ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 16 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಚಂದ್ರಶೇಖರ ಅವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ : ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶಗೈದು ಮಾಲಿಕನ ಎದುರಲ್ಲೇ ಸೊತ್ತು ಕಳವುಗೈದ ಆರೋಪಿಗಳು Rating: 5 Reviewed By: karavali Times
Scroll to Top