ವಾಹನ ಕಳವು ಪ್ರಕರಣ ಬೇಧಿಸಿ ಲಕ್ಷಾಂತರ ಮೌಲ್ಯದ ವಾಹನಗಳ ಸಹಿತ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ ಧರ್ಮಸ್ಥಳ ಪೊಲೀಸರು - Karavali Times ವಾಹನ ಕಳವು ಪ್ರಕರಣ ಬೇಧಿಸಿ ಲಕ್ಷಾಂತರ ಮೌಲ್ಯದ ವಾಹನಗಳ ಸಹಿತ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ ಧರ್ಮಸ್ಥಳ ಪೊಲೀಸರು - Karavali Times

728x90

5 March 2024

ವಾಹನ ಕಳವು ಪ್ರಕರಣ ಬೇಧಿಸಿ ಲಕ್ಷಾಂತರ ಮೌಲ್ಯದ ವಾಹನಗಳ ಸಹಿತ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ ಧರ್ಮಸ್ಥಳ ಪೊಲೀಸರು

ಧರ್ಮಸ್ಥಳ, ಮಾರ್ಚ್ 06, 2024 (ಕರಾವಳಿ ಟೈಮ್ಸ್) : ಧರ್ಮಸ್ಥಳ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಫೆಬ್ರವರಿ 15 ಹಾಗೂ ಮಾರ್ಚ್ 1 ರಂದು ದಾಖಲಾದ 2 ಬೈಕ್ ಹಾಗೂ ಮಾರುತಿ800 ಕಾರು ಕಳವು ಪ್ರಕರಣ ಬೇಧಿಸಿದ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಗಳನ್ನು ಹಾಸನ ಜಿಲ್ಲೆ, ಕುಪ್ಪಳ್ಳಿ ಕಸಬಾ ಹೋಬಳಿ, ಹೊಸಲೈನ್ ರಸ್ತೆ, ಡಬ್ಬಲ್ ಟ್ಯಾಂಕ್ ಹಿಂಭಾಗದ ನಿವಾಸಿ ನಂದನ ಗೌಡ ಕೆ ಡಿ (21), ಹಾಸನ ಜಿಲ್ಲೆ ಹೇಮಾವತಿ ಆಸ್ಪತ್ರೆ ಬಳಿ ನಿವಾಸಿ ಹೇಮಂತ್ (20) ಹಾಗೂ ಪಾಂಡುರಂಗ ದೇವಸ್ಥಾನ ಬಳಿಯ ನಿವಾಸಿ ಹರ್ಷಿತ್ ಕುಮಾರ್ ಎಚ್ ಎಸ್ (19) ಎಂದು ಹೆಸರಿಸಲಾಗಿದೆ. 

ಬಂಧಿತ ಆರೋಪಿಗಳಿಂದ ಕಳವು ಮಾಡಿದ್ದ ಕೆಎ21 ವೈ0967 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್, ಸಿಟಿಎ6596 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್, ಕೆಎ21 ಡಬ್ಲ್ಯು4320 ಸುಜುಕಿ ಜಿಕ್ಸರ್ ಮೋಟಾರ್ ಸೈಕಲ್, ಕೆಎ20 ಎಂಇ1456 ನೋಂದಣಿ ಸಂಖ್ಯೆಯ ಕಾರುಗಳನ್ನು ಪೊಲೀಸರು ಸ್ವಾದೀನಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ವಾಹನಗಳ ಮೌಲ್ಯ 2 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. 

ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಫೆ 15 ರಂದು ಕೆಎ21 ವೈ0967 ನೋಂದಣಿ ಸಂಖ್ಯೆಯ ಯಮಹಾ ಕಂಪೆನಿಯ ಆರ್15 ಮಾದರಿಯ ಮೋಟಾರ್ ಸೈಕಲ್ (ಅಪರಾಧ ಕ್ರಮಾಂಕ 09/2024) ಹಾಗೂ ಅದೇ ದಿನ ಸಿಟಿಎ6596 ನೋಂದಣಿ ಸಂಖ್ಯೆಯ ಯಮಹಾ ಕಂಪೆನಿಯ ಆರ್ ಎಕ್ಸ್ 100 ಮೋಟಾರ್ ಸೈಕಲ್ (ಅಪರಾಧ ಕ್ರಮಾಂಕ 09/2024) ಕಳ್ಳತನವಾದ ಬಗ್ಗೆ ಹಾಗೂ ಮಾರ್ಚ್ 1 ರಂದು ಕೆಎ20 ಎಂಇ 1456 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಮಾರುತಿ 800 ಕಾರು ಕಳ್ಳತನವಾದ ಬಗ್ಗೆ (ಅಪರಾಧ ಕ್ರಮಾಂಕ 16/2024) ಪ್ರಕರಣಗಳು ದಾಖಲಾಗಿತ್ತು. 

ಕಳ್ಳತನ ಪ್ರಕರಣಗಳ ಪತ್ತೆಗಾಗಿ ಜಿಲ್ಲಾ ಎಸ್ಪಿ ಸಿ.ಬಿ ರಿಷ್ಯಂತ್ ಅವರ ನಿರ್ದೇಶನದಲ್ಲಿ, ಎಡಿಶನಲ್ ಎಸ್ಪಿಗಳಾದ ಧರ್ಮಪ್ಪ ಎನ್ ಎಂ ಹಾಗೂ ರಾಜೇಂದ್ರ ಡಿ ಎಸ್ ಅವರ ಹಾಗೂ ಬಂಟ್ವಾಳ ಡಿವೈಎಸ್ಪಿ ಎಸ್ ವಿಜಯ ಪ್ರಸಾದ್, ಬೆಳ್ತಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ವಸಂತರಾಮ ಆಚಾರ್ ಅವರುಗಳ ಮಾರ್ಗದರ್ಶನದಲ್ಲಿ, ಧರ್ಮಸ್ಥಳ ಪೆÇಲೀಸ್ ಠಾಣಾ ಪಿಎಸ್ಸೈಗಳಾದ ಅನಿಲ್ ಕುಮಾರ ಡಿ, ಸಮರ್ಥ ಗಾಣಿಗೇರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸ್ಯಾಮುವೆಲ್, ರಾಜೇಶ್ ಎನ್, ಶಶಿಧರ, ಪ್ರಶಾಂತ, ಅಸ್ಲಾಂ, ಸತೀಶ್ ನಾಯ್ಕ್, ಕೃಷ್ಣಪ್ಪ, ಪ್ರಮೋದಿನಿ, ಮಲ್ಲಿಕಾರ್ಜುನ, ಅಭಿಜಿತ್, ಗೋವಿಂದ ರಾಜ್ ಅವರುಗಳನ್ನೊಳಗೊಂಡ ತಂಡ ಈ ಬಂಧನ ಕಾರ್ಯಾಚರಣೆ ನಡೆಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವಾಹನ ಕಳವು ಪ್ರಕರಣ ಬೇಧಿಸಿ ಲಕ್ಷಾಂತರ ಮೌಲ್ಯದ ವಾಹನಗಳ ಸಹಿತ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ ಧರ್ಮಸ್ಥಳ ಪೊಲೀಸರು Rating: 5 Reviewed By: karavali Times
Scroll to Top