ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿದ ಕಡಬ ಪೊಲೀಸರು, ಪಿಕಪ್ ಸಹಿತ ಅರ್ಧ ಟನ್ ಮರಳು ವಶಕ್ಕೆ - Karavali Times ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿದ ಕಡಬ ಪೊಲೀಸರು, ಪಿಕಪ್ ಸಹಿತ ಅರ್ಧ ಟನ್ ಮರಳು ವಶಕ್ಕೆ - Karavali Times

728x90

14 March 2024

ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿದ ಕಡಬ ಪೊಲೀಸರು, ಪಿಕಪ್ ಸಹಿತ ಅರ್ಧ ಟನ್ ಮರಳು ವಶಕ್ಕೆ

ಕಡಬ, ಮಾರ್ಚ್ 14, 2024 (ಕರಾವಳಿ ಟೈಮ್ಸ್) : ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿದ ಪೊಲೀಸರು ಪಿಕಪ್ ವಾಹನ ಸಹಿತ ಮರಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡ ಘಟನೆ ನೂಜಿ ಬಾಳ್ತಿಲ ಗ್ರಾಮದಲ್ಲಿ ಗುರುವಾರ ಬೆಳಗ್ಗಿನ ಜಾವ ನಡೆದಿದೆ. 

ನೂಜಿ ಬಾಳ್ತಿಲ ಗ್ರಾಮ ಗುಂಡ್ಯ ಹೊಳೆಯಿಂದ ಈ ಅಕ್ರಮ ಮರಳು ಕಳವು ಹಾಗೂ ಸಾಗಾಟ ನಡೆಸಲಾಗುತ್ತಿತ್ತು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಡಬ ಪಿಎಸ್ಸೈ ಅಭಿನಂದನ ಎಂ ಎಸ್ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದು, ಪಿಕಪ್ ವಾಹನ ಸಹಿತ ಅರ್ಧ ಟನ್ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನದ ಮಾಲಕ ಹಾಗೂ ಚಾಲಕ ನೂಜಿ ಬಾಳ್ತಿಲ ಗ್ರಾಮದ ನಿವಾಸಿ ಪ್ರಭಾಕರ (43) ಎಂಬಾತನ ವಿರುದ್ದ ಕಡಬ ಪೆÇಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿದ ಕಡಬ ಪೊಲೀಸರು, ಪಿಕಪ್ ಸಹಿತ ಅರ್ಧ ಟನ್ ಮರಳು ವಶಕ್ಕೆ Rating: 5 Reviewed By: karavali Times
Scroll to Top