ಅಕ್ರಮ ಮರಳು ಮಾಫಿಯಾ ವಿರುದ್ದ ಸಮರ ಸಾರಿದ ಗಣಿ ಇಲಾಖೆ : ಇನ್ನು ಮುಂದೆ ಆಯಕಟ್ಟಿನ ಪ್ರದೇಶಗಳಲ್ಲಿ ಸೀಸಿ ಕ್ಯಾಮೆರಾ ಕಣ್ಗಾವಲು, ಕಟ್ಟುನಿಟ್ಟಿನ ಕ್ರಮ ಆಗಲಿದೆಯೇ ಅಥವಾ ಕಣ್ಕಟ್ಟಿನ ಕ್ರಮ ಆಗಲಿದೆಯೇ? - Karavali Times ಅಕ್ರಮ ಮರಳು ಮಾಫಿಯಾ ವಿರುದ್ದ ಸಮರ ಸಾರಿದ ಗಣಿ ಇಲಾಖೆ : ಇನ್ನು ಮುಂದೆ ಆಯಕಟ್ಟಿನ ಪ್ರದೇಶಗಳಲ್ಲಿ ಸೀಸಿ ಕ್ಯಾಮೆರಾ ಕಣ್ಗಾವಲು, ಕಟ್ಟುನಿಟ್ಟಿನ ಕ್ರಮ ಆಗಲಿದೆಯೇ ಅಥವಾ ಕಣ್ಕಟ್ಟಿನ ಕ್ರಮ ಆಗಲಿದೆಯೇ? - Karavali Times

728x90

7 April 2024

ಅಕ್ರಮ ಮರಳು ಮಾಫಿಯಾ ವಿರುದ್ದ ಸಮರ ಸಾರಿದ ಗಣಿ ಇಲಾಖೆ : ಇನ್ನು ಮುಂದೆ ಆಯಕಟ್ಟಿನ ಪ್ರದೇಶಗಳಲ್ಲಿ ಸೀಸಿ ಕ್ಯಾಮೆರಾ ಕಣ್ಗಾವಲು, ಕಟ್ಟುನಿಟ್ಟಿನ ಕ್ರಮ ಆಗಲಿದೆಯೇ ಅಥವಾ ಕಣ್ಕಟ್ಟಿನ ಕ್ರಮ ಆಗಲಿದೆಯೇ?

ಬಂಟ್ವಾಳ, ಎಪ್ರಿಲ್ 07, 2024 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಮರಳು ಮಾಫಿಯಾ ಮೇರೆ ಮೀರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು ಕೊನೆಗೂ ಎಚ್ಚೆತ್ತುಕೊಂಡಿದ್ದು, ಸೀಸಿ ಕ್ಯಾಮೆರಾ ಅಳವಡಿಕೆ ಮೂಲಕ ಅಕ್ರಮ ತಡೆಗೆ ಮುಂದೆ ಬಂದಿದೆ. 

ಅಕ್ರಮ ಮರಳುಗಾರಿಕೆಯ ಕುರಿತು ಅತಿ ಹೆಚ್ಚಿನ ದೂರು ಬರುತ್ತಿದ್ದ ಪ್ರದೇಶದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ಸಿಸಿ ಕ್ಯಾಮರಾಗಳ ಅಳವಡಿಕೆಯ ಮೂಲಕ ಅಕ್ರಮ ಪತ್ತೆಗೆ ಮುಂದಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ದೂರು ಬರುತ್ತಿರುವ 30 ಕಡೆಗಳಲ್ಲಿ ಇಲಾಖೆ ಸೋಲಾರ್ ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ.

ಜಿಲ್ಲಾ ಪೆÇಲೀಸ್ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ 4 ಕಡೆ ಹಾಗೂ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ 26 ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ/ ಸಾಗಾಟದ ಕುರಿತು ಗಣಿ ಇಲಾಖೆ ಸೀಸಿ ಕ್ಯಾಮೆರಾ ಅಳವಡಿಕೆ ಮೂಲಕ ಅಕ್ರಮ ನಿಯಂತ್ರಣಕ್ಕೆ ಮುಂದಾಗಿದೆ. ರಸ್ತೆ ಬದಿ ಕಂಬ ನಿರ್ಮಿಸಿ ಅದರಲ್ಲಿ ಪೆಟ್ಟಿಗೆ ಅಳವಡಿಸಿ ಒಳಭಾಗದಲ್ಲಿ ಕ್ಯಾಮರಾ ಅಳವಡಿಸಿ ಪೆಟ್ಟಿಗೆಯ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗಿರುವುದು ಕಂಡು ಬಂದಿದೆ. 

ಅಕ್ರಮ ಮರಗಳುಗಾರಿಕೆ ಸಂಬಂಧಿಸಿದಂತೆ ವ್ಯಾಪಕ ದೂರುಗಳು ಬರುತ್ತಿರುವ ಸ್ಥಳಗಳನ್ನು ಗುರುತಿಸಿ ಈ ಕ್ಯಾಮರಾ ಅಳವಡಿಸಲಾಗಿದ್ದು, ಅದನ್ನು ಇಲಾಖೆಯಿಂದಲೇ ಮಾನಿಟರ್ ಮಾಡಲಾಗುತ್ತದೆ. ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ಲಾರಿಗಳ ನೋಂದಣಿ ಸಂಖ್ಯೆಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖಾಧಿಕರಿಗಳು ತಿಳಿಸುತ್ತಾರೆ. 

ಜಿಲ್ಲಾ ಪೆÇಲೀಸ್ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ಪುದು ಗ್ರಾಮದ ದೇವರಪಾಲು, ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ, ಸಜಿಪನಡು ಗ್ರಾಮದ ಮಿತ್ತಪಡ್ಪು ಸರ್ಕಲ್ ಕೋಟೆಕಣಿ, ನೇತ್ರಾವತಿ ನದಿ ಕಿನಾರೆ ಜುಮಾ ಮಸೀದಿ ಬಳಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಕೋಣಾಜೆ ಪೆÇಲೀಸ್ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಬಸ್ತಿಕಟ್ಟೆ ಬಸ್ಸು ನಿಲ್ದಾಣ, ಮುನ್ನೂರು ಗ್ರಾಮದ ಸೋಮನಾಥೇಶ್ವರ ಉಳಿಯ ಮಹಾದ್ವಾರ, ಎಲ್ಯಾರ್‍ಪದವು ಚರ್ಚ್ ಬಳಿ, ಹರೇಕಳ ಕಡವಿನ ಬಳಿ, ಇನೋಳಿಪದವು, ಉಳ್ಳಾಲ ಪೆÇಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಟೋಲ್ ಆಟೋ ನಿಲ್ದಾಣದ ಬಳಿ, ಉಳ್ಳಾಲ ಸೋಮೇಶ್ವರ ಮಹಾದ್ವಾರ, ಮೂಲ್ಕಿ ಪೆÇಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಬಸ್ಸು ನಿಲ್ದಾಣದ ಬಳಿ, ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣ ಗುರು ರಸ್ತೆ (ಚೇಳ್ಯಾರು ಕ್ರಾಸ್) ಕ್ಯಾಮರಾ ಅಳವಡಿಸಲಾಗಿದೆ.

ಮಂಗಳೂರು ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ಅರ್ಕುಳ ವಳಚ್ಚಿಲ್ ಮಸೀದಿ ಬಳಿ, ವಳಚ್ಚಿಲ್, ಅಡ್ಯಾರ್ ಸಹ್ಯಾದ್ರಿ ಕಾಲೇಜು ಬಳಿ, ಉಳಾಯಿಬೆಟ್ಟು, ಮಲ್ಲೂರು ಇಡ್ಮಾ, ಕಂಕನಾಡಿ ನಗರ ಪೆÇಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಮಸೀದಿ ಬಳಿ, ಕಣ್ಣೂರು ಬಡ್ಲ, ಬಜಾಲ್ ಫೈಸಲ್‍ನಗರ, ಜಪ್ಪಿನಮೊಗರು ಕಡೇಕಾರು, ತಾರೆದೋಲ್ಯ, ಪೆರ್ಮನ್ನೂರು ಆಡಂಕುದ್ರು, ಬಜ್ಪೆ ಪೆÇಲೀಸ್ ಠಾಣಾ ವ್ಯಾಪ್ತಿಯ ಅದ್ಯಪಾಡಿ ಮರವೂರು ಸೇತುವೆ, ಅದ್ಯಪಾಡಿ, ಅಡ್ಡೂರು ಜಂಕ್ಷನ್, ಕಾವೂರು ಪೆÇಲೀಸ್ ಠಾಣಾ ವ್ಯಾಪ್ತಿಯ ಪಡುಶೆಡ್ಡೆ ರೈಲ್ವೇ ಅಂಡರ್‍ಪಾಸ್ ಸಮೀಪ, ಪಡುಶೆಡ್ಡೆ ಓಜಲಾಯ ದೈವಸ್ಥಾನದ ಬಳಿ ಪರವಾನಿಗೆ ರಹಿತ ಮರಳುಗಾರಿಕೆಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ಬರುತ್ತಿರುವ ಪ್ರದೇಶಗಳನ್ನು ಗುರುತಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವತಿಯಿಂದ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರ ಮೂಲಕ ಅಕ್ರಮವನ್ನು ತಡೆಯುವ ಕಾರ್ಯ ಮಾಡಲಾಗುತ್ತದೆ ಎಂದು ಇಲಾಖಾಧಿಕಾರಿಗಳು ಹೇಳುತ್ತಾರೆ. 

ಗಣಿ ಇಲಾಖಾಧಿಕಾರಿಗಳ ಈ ಕ್ರಮ ಮರಳು ಮಾಫಿಯಾ ವಿರುದ್ದ ಕಠಿಣ ಕ್ರಮ ಆಗಲಿದೆಯೇ ಅಥವಾ ಕೇವಲ ಕಣ್ಕಟ್ಟಿನ ಕ್ರಮಕ್ಕೆ ಸೀಮಿತವಾಗಲಿದೆಯೇ ಎಂದು ಸಾರ್ವಜನಿಕರು ಕುತೂಹಲ ವ್ಯಕ್ತಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಮರಳು ಮಾಫಿಯಾ ವಿರುದ್ದ ಸಮರ ಸಾರಿದ ಗಣಿ ಇಲಾಖೆ : ಇನ್ನು ಮುಂದೆ ಆಯಕಟ್ಟಿನ ಪ್ರದೇಶಗಳಲ್ಲಿ ಸೀಸಿ ಕ್ಯಾಮೆರಾ ಕಣ್ಗಾವಲು, ಕಟ್ಟುನಿಟ್ಟಿನ ಕ್ರಮ ಆಗಲಿದೆಯೇ ಅಥವಾ ಕಣ್ಕಟ್ಟಿನ ಕ್ರಮ ಆಗಲಿದೆಯೇ? Rating: 5 Reviewed By: karavali Times
Scroll to Top