ಬಿ.ಸಿ.ರೋಡು : ವಿಶೇಷ ಚೇತನ ವ್ಯಕ್ತಿಗಳಿಂದ ಮತದಾರರ ಜಾಗೃತಿ ಕಾರ್ಯಕ್ರಮ - Karavali Times ಬಿ.ಸಿ.ರೋಡು : ವಿಶೇಷ ಚೇತನ ವ್ಯಕ್ತಿಗಳಿಂದ ಮತದಾರರ ಜಾಗೃತಿ ಕಾರ್ಯಕ್ರಮ - Karavali Times

728x90

6 April 2024

ಬಿ.ಸಿ.ರೋಡು : ವಿಶೇಷ ಚೇತನ ವ್ಯಕ್ತಿಗಳಿಂದ ಮತದಾರರ ಜಾಗೃತಿ ಕಾರ್ಯಕ್ರಮ

ಬಂಟ್ವಾಳ, ಎಪ್ರಿಲ್ 06, 2024 (ಕರಾವಳಿ ಟೈಮ್ಸ್) : ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಬಂಟ್ವಾಳ ತಾಲೂಕು ಸ್ವೀಪ್ ಸಮಿತಿಯ ಆಶ್ರಯದಲ್ಲಿ ತಾಲೂಕಿನ ಸುಮಾರು 62 ಜನ ವಿಶೇಷ ಚೇತನÀ ವ್ಯಕ್ತಿಗಳಿಂದ ಮತದಾನದ ಜಾಗೃತಿ ಕಾರ್ಯಕ್ರಮ ಶನಿವಾರ ಬಿ ಸಿ ರೋಡಿನಲ್ಲಿ ನಡೆಯಿತು. 

ಬಂಟ್ವಾಳ ತಾಲೂಕು ಕಛೇರಿಯಿಂದ ಹೊರಟ ಜಾಗೃತಿ ಜಾಥಾ ಬಿ ಸಿ ರೋಡು ಪೇಟೆಯ ಮೂಲಕ ಸಾಗಿ ಬಂಟ್ವಾಳ ತಾಲೂಕು ಪಂಚಾಯತ್ ವಠಾರದಲ್ಲಿ ಸಮಾಪನಗೊಂಡಿತು. ಸಮಾಪನ ಕಾರ್ಯಕ್ರದಲ್ಲಿ ಮಾತನಾಡಿದ ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಕಾಂಬ್ಳೆ ಅವರು, ನಿಷ್ಪಕ್ಷಪಾತ ಮತದಾನ ಹಾಗೂ ಯಾವುದೇ ಆಮಿಷಗಳಿಗೆ ಬಲಿಯಾಗದೇ ಸ್ವತಂತ್ರವಾಗಿ ನೀವು ಹಾಗೂ ನಿಮ್ಮ ಮನೆಯವರೆಲ್ಲರು ಮತದಾನ ಮಾಡುವಂತೆ ಕರೆ ನೀಡಿದರು. 

ಸಹಾಯಕ ನಿರ್ದೇಶಕ ವಿಶ್ವನಾಥ ಬಿ, ತಾಲೂಕು ಕಛೇರಿಯ ಕೇಂದ್ರ ಸ್ಥಾನೀಯ ಉಪತಹಶೀಲ್ದಾರ್ ನರೇಂದ್ರನಾಥ ಭಟ್, ಸ್ವೀಪ್ ಸಮಿತಿ ಸದಸ್ಯರಾದ ಚಂದ್ರಶೇಖರ್ ಪಾತೂರು, ಪ್ರಕಾಶ್ ಪಿ, ಪ್ರಶಾಂತ್, ಅಶೋಕ್ ಕುಮಾರ್, ರಾಜೇಶ್, ವಿಶೇಷಚೇತನರ ಪುನರ್ವಸತಿ ಕಾರ್ಯಕರ್ತರಾದ ಗಿರೀಶ್, ಜಗದೀಶ್, ದೀಪಾ ಪಡಿಯಾರ್ ಮೊದಲಾದವರು ಭಾಗವಹಿಸಿದ್ದರು. ಸ್ವೀಪ್ ಸಮಿತಿಯ ತಾಲೂಕು ನೋಡಲ್ ಅಧಿಕಾರಿ ಶ್ರೀಮತಿ ಸುರೇಖಾ ಯಾಳವಾರ ಪ್ರಮಾಣ ವಚನ ಬೋಧಿಸಿ, ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ವಿಶೇಷ ಚೇತನ ವ್ಯಕ್ತಿಗಳಿಂದ ಮತದಾರರ ಜಾಗೃತಿ ಕಾರ್ಯಕ್ರಮ Rating: 5 Reviewed By: karavali Times
Scroll to Top