ಮಂಗಳೂರು, ಎಪ್ರಿಲ್ 24, 2024 (ಕರಾವಳಿ ಟೈಮ್ಸ್) : ಲೋಕಸಭಾ ಚುನಾವಣೆಯ ದಿನವಾಗಿರುವ ಎಪ್ರಿಲ್ 26 ರಂದು ಸಮಸ್ತ ಕೇರಳ ಅಧೀನದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮದರಸಗಳಿಗೆ ರಜೆ ಘೋಷಿಸಿ ಆದೇಶಿಸಲಾಗಿದೆ.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ನಿರ್ದೇಶನದಂತೆ ಸಮಸ್ತದ ಅಧೀನದಲ್ಲಿ ಬರುವ ದ ಕ ಜಿಲ್ಲೆಯ ಎಲ್ಲಾ ಮದರಸಗಳಿಗೆ ರಜೆ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಂಶುದ್ದೀನ್ ದಾರಿಮಿ ಹಾಗೂ ಸಮಸ್ತ ಮದರಸ ಮೆನೇಜ್ ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಎಂ ಎಚ್ ಮೊಯ್ದಿನ್ ಹಾಜಿ ತಿಳಿಸಿದ್ದಾರೆ.
0 comments:
Post a Comment