ಬಿಜೆಪಿಯ ಸುಳ್ಳು ಹಾಗೂ ಅಪಪ್ರಚಾರಗಳಿಂದ ಬಂಟ್ವಾಳದಲ್ಲಿ ‘ಕೈ’ ತಪ್ಪಿದ್ದ ಮತಗಳು ಮರಳಿ ಬುಟ್ಟಿಗೆ, ಮನೆ ಬೆಳಗಿದ ‘ಗ್ಯಾರಂಟಿ’ಯಿಂದ ಬಂಟ್ವಾಳದಲ್ಲಿ 15-20 ಸಾವಿರ ಲೀಡ್
ಬಂಟ್ವಾಳ, ಎಪ್ರಿಲ್ 24, 2024 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲೆಲ್ಲಾ ಬಡವರ, ಕಾರ್ಮಿಕ, ರೈತರ, ದುಡಿಯುವ ವರ್ಗದ, ಶೋಷಿತರ ಪರ ಕಾರ್ಯಕ್ರಮಗಳನ್ನು ನಿರಂತರವಾಗಿ ಜಾರಿಗೊಳಿಸಿ ಜನರ ಬದುಕುವ ಹಕ್ಕನ್ನು ಎತ್ತಿ ಹಿಡಿದಿತ್ತು. ಆದರೆ ಕಳೆದ 10 ವರ್ಷಗಳಿಂದ ನಿರಂತರ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನರ ಬದುಕುವ ಹಕ್ಕನ್ನೇ ಕಸಿದುಕೊಂಡು ಜನರ ಜೀವನವನ್ನೇ ಬೀದಿ ಪಾಲು ಮಾಡಿದೆ ಎಂಬುದು ಜನತೆಗೆ ಅರಿವಾಗಿದೆ. ಇದುವೇ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ನಿರ್ಧಾರಕ್ಕೆ ಜನ ಬಂದಾಗಿದೆ. ಕಾಂಗ್ರೆಸ್ಸಿನ ಬಡವರ ಯೋಜನೆಗಳು, ಅಭಿವೃದ್ದಿ ಕಾರ್ಯಗಳನ್ನು ಜನ ಮನವರಿಕೆ ಮಾಡಿಕೊಳ್ಳಲು ಬಿಜೆಪಿಯ ದುರಾಡಳಿತ ಕಾರಣವಾಯಿತು ಎಂದು ಲೋಕಸಭಾ ಚುನಾವಣೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಯೋಜಕ ಹಾಗೂ ವೀಕ್ಷಕ, ಬುಡಾ ಮಾಜಿ ಅಧ್ಯಕ್ಷ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರದ ನಡುವೆ ಪತ್ರಿಕೆ ಜೊತೆ ಮಾತನಾಡಿದ ಅವರು ಕಳೆದ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಡವರ ಮನೆ ತಲುಪಿಸಿದ ಐದು ಗ್ಯಾರಂಟಿ ಯೋಜನೆಗಳು ಈ ಬಾರಿ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಇದುವೇ ಕಾಂಗ್ರೆಸ್ ಕೈ ಹಿಡಿಯಲಿದೆ ಎಂದು ಹೇಳಿಕೊಂಡಿದ್ದಾರೆ.
ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿವೆ. ಜನರ ಜೀವನ ಜೊತೆ ಚೆಲ್ಲಾಟವಾಡಿದ ಈ ಸರಕಾರ ಈ ಬಾರಿ ಖಂಡಿತ ಪತನಗೊಳ್ಳಲಿದ್ದು, ಕಾಂಗ್ರೆಸ್ ನೇತತ್ವದ ಜನಪರ ಸರಕಾರ ಮತ್ತೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ದೇಶಾದ್ಯಂತ ಜನ ತೋರುತ್ತಿರುವ ಪ್ರತಿಕ್ರಿಯೆಯೇ ಇದನ್ನು ಸಾಕ್ಷೀಕರಿಸುತ್ತಿದೆ ಎಂದಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಪಕ್ಷದ ಗ್ಯಾರಂಟಿ ಯೋಜನೆಗಳ ಘೋಷಣೆಯನ್ನು ಬಿಜೆಪಿಗರು ಸುಳ್ಳು ಅಪಪ್ರಚಾರಗಳಿಂದ ಕೆಲವೊಂದು ಮತದಾರರನ್ನು ದಾರಿ ತಪ್ಪಿಸಿದ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ, ಅಭಿವೃದ್ದಿಗಳ ರೂವಾರಿ ಬಿ ರಮನಾಥ ರೈ ಅವರಿಗೆ ಅಲ್ಪ ಮತಗಳ ಅಂತರದ ಸೋಲಾಗಿದೆ ಎಂದ ಪಿಯೂಸ್ ಎಲ್ ರೋಡ್ರಿಗಸ್ ಈ ಬಾರಿ ಯಾವುದೇ ಅಪಪ್ರಚಾರಗಳು, ಸುಳ್ಳುಗಳು ಜನರ ಮುಂದೆ ನಡೆಯುವುದಿಲ್ಲ. ಬಿಜೆಪಿ ಎಂಬುದು ಬರೀ ಬೋಗಸ್. ಕಾಂಗ್ರೆಸ್ ಪಕ್ಷವೇ ಬಡವರ ಜೀವನಕ್ಕೆ ಪೂರಕ ಎಂಬುದನ್ನು ಜನ ಪೂರ್ಣವಾಗಿ ಮನವರಿಕೆ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಬಂಟ್ವಾಳದಲ್ಲೂ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ಸುಮಾರು 15 ರಿಂದ 20 ಸಾವಿರ ಮತಗಳ ಅಂತರದ ಮುನ್ನಡೆ ಸಾಧಿಸಲಿದ್ದಾರೆ ಎಂಬ ತುಂಬು ವಿಶ್ವಾಸವಿದೆ ಎಂದು ಹೇಳಿದ್ದಾರೆ.
0 comments:
Post a Comment