ವಾಹನಗಳ ನೋಂದಣಿ ಅಂಕೆ-ಸಂಖ್ಯೆಗಳ ಆಧಾರದಲ್ಲಿ ಮಟ್ಕಾ ಜೂಜಾಟ : ಇಬ್ಬರ ಬಂಧಿಸಿದ ಬಂಟ್ವಾಳ ಪೊಲೀಸರು - Karavali Times ವಾಹನಗಳ ನೋಂದಣಿ ಅಂಕೆ-ಸಂಖ್ಯೆಗಳ ಆಧಾರದಲ್ಲಿ ಮಟ್ಕಾ ಜೂಜಾಟ : ಇಬ್ಬರ ಬಂಧಿಸಿದ ಬಂಟ್ವಾಳ ಪೊಲೀಸರು - Karavali Times

728x90

30 April 2024

ವಾಹನಗಳ ನೋಂದಣಿ ಅಂಕೆ-ಸಂಖ್ಯೆಗಳ ಆಧಾರದಲ್ಲಿ ಮಟ್ಕಾ ಜೂಜಾಟ : ಇಬ್ಬರ ಬಂಧಿಸಿದ ಬಂಟ್ವಾಳ ಪೊಲೀಸರು

ಬಂಟ್ವಾಳ, ಎಪ್ರಿಲ್ 30, 2024 (ಕರಾವಳಿ ಟೈಮ್ಸ್) : ಇಲ್ಲಿಗೆ ಸಮೀಪದ ಬಡ್ಡಕಟ್ಟೆ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಓಡಾಡುವ ವಾಹನಗಳ ನೋಂದಣಿ ಅಂಕೆ-ಸಂಖ್ಯೆಗಳ ಆಧಾರದಲ್ಲಿ ಮಟ್ಕಾ ಜೂಜಾಟ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳನ್ನು ಪಾಣೆಮಂಗಳೂರು ನಿವಾಸಿ ಗುರುರಾಜ್ (32) ಹಾಗೂ ಕೇರಳ ರಾಜ್ಯದ ಮಂಜೇಶ್ವರ-ಕುಂಜತ್ತೂರು ನಿವಾಸಿ ಚಿದನ್ (40) ಎಂದು ಹೆಸರಿಸಲಾಗಿದೆ. 

ಆರೋಪಿಗಳು ರಸ್ತೆಯಲ್ಲಿ ಓಡಾಡುವ ವಾಹನಗಳ ನೋಂದಣಿ ಅಂಕೆ-ಸಂಖ್ಯೆಗಳ ಅಧಾರದಲ್ಲಿ, ಮಟ್ಕಾ ಜೂಜಾಟ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ಬಂಟ್ವಾಳ ನಗರ ಠಾಣಾ ಪಿಎಸ್ಸೈ ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿತರಿಂದ ಮಟ್ಕಾ ಚೀಟಿ ವ್ಯವಹಾರದಿಂದ ಪಡೆದ 2,240/- ರೂಪಾಯಿ ನಗದು ಹಣ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ವಾಹನಗಳ ನೋಂದಣಿ ಅಂಕೆ-ಸಂಖ್ಯೆಗಳ ಆಧಾರದಲ್ಲಿ ಮಟ್ಕಾ ಜೂಜಾಟ : ಇಬ್ಬರ ಬಂಧಿಸಿದ ಬಂಟ್ವಾಳ ಪೊಲೀಸರು Rating: 5 Reviewed By: karavali Times
Scroll to Top