ಬಂಟ್ವಾಳ, ಎಪ್ರಿಲ್ 14, 2024 (ಕರಾವಳಿ ಟೈಮ್ಸ್) : ಲೋಕಸಭಾ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷಕ್ಕೆ ಮೇಲ್ಪಟ್ಟ ಮತ್ತು ಶೇಕಡಾ 40 ಕ್ಕಿಂತ ಜಾಸ್ತಿ ಅಂಗವೈಕಲ್ಯತೆ ಹೊಂದಿರುವ ಮತದಾರರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸುವ ಕಾರ್ಯ ಸೋಮವಾರದಿಂದ ಆರಂಭಗೊಂಡಿದೆ.
ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ 25 ಮತಗಟ್ಟೆ ಅಧಿಕಾರಿಗಳ ತಂಡ ರಚಿಸಲಾಗಿದ್ದು, ಈಗಾಗಲೇ ಮತದಾರರ ಪಟ್ಟಿಯಲ್ಲಿ ದಾಖಲಿರುವ ಹಿರಿಯ ಮತ್ತು ಅಂಗವಿಕಲ ಮತದಾರರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸಲಿದ್ದಾರೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತಲಿರುವರು. ಸಂಪೂರ್ಣ ಮತದಾನದ ವಿಡಿಯೋಗ್ರಾಫಿ ಮಾಡಲಾಗುತ್ತದೆ. ಮೊಡಂಕಾಪಿನ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ವಾಹ್ನ 7 ಗಂಟೆಯಿಂದ ಮಸ್ಟರಿಂಗ್ ಕಾರ್ಯ ನಡೆಯಿತು.
ಈ ಸಂದರ್ಭ 205-ಬಂಟ್ವಾಳದ ಸಹಾಯಕ ಚುನಾವಣಾಧಿಕಾರಿ ಡಾ ಉದಯ ಶೆಟ್ಟಿ, ತಹಶೀಲ್ದಾರ್ ಅರ್ಚನಾ ಭಟ್, ಉಪತಹಶೀಲ್ದಾರ್ ನವೀನ್ ಬೆಂಜನಪದವು, ಮಾಸ್ಟರ್ ಟ್ರೈನರ್ ಅಬ್ದುಲ್ ರಝಾಕ್, ವಿಷಯ ನಿರ್ವಾಹಕ ಮಂಜುನಾಥ್ ಕೆ ಎಚ್, ಬಿ ಮೂಡ ಗ್ರಾಮ ಆಡಳಿತ ಅಧಿಕಾರಿ ಕರಿಬಸಪ್ಪ ನಾಯಕ್, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
ಪ್ರತೀ ತಂಡದಲ್ಲಿ ಪೆÇಲೀಸ್ ಸಿಬ್ಬಂದಿ ಮತ್ತು ಬಿ ಎಲ್ ಒ ರವರೂ ಸೇರಿದಂತೆ ಏಳು ಜನ ಇರಲಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ 90 ಮತಗಟ್ಟೆ ಅಧಿಕಾರಿಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ಸದ್ರಿ ಮತದಾನ ಪ್ರಕ್ರಿಯೆ ಎಪ್ರಿಲ್ ಬುಧವಾರದವರೆಗೆ ನಡೆಯಲಿದೆ.
0 comments:
Post a Comment