ಬಂಟ್ವಾಳ, ಮೇ 02, 2024 (ಕರಾವಳಿ ಟೈಮ್ಸ್) : ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರರಿಬ್ಬರು ಗಾಯಗೊಂಡ ಘಟನೆ ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ಸಂಭವಿಸಿದೆ.
ಗಾಯಾಳು ಬೈಕ್ ಸವಾರರನ್ನು ಮುಸ್ತಫಾ ಹಾಗೂ ಆತನ ಸಂಬಂಧಿ ಸಂಶುದ್ದೀನ್ ಎಂದು ಹೆಸರಿಸಲಾಗಿದೆ. ಮುಸ್ತಾಫ್ ಅವರು ಸಂಶುದ್ದೀನ್ ಅವರನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿರುವ ವೇಳೆ ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ನಾಯಿಯೊಂದು ರಸ್ತೆಗೆ ಅಡ್ಡ ಬಂದು ಚಾಲಕನ ನಿಯಂತ್ರಣ ಮೀರಿದ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಬೈಕ್ ಸವಾರ ಮುಸ್ತಫಾಗೆ ತರಚಿದ ಗಾಯಗಳಾಗಿದ್ದು, ತೀವ್ರ ಗಾಯಗೊಂಡ ಸಹಸವಾರ ಸಂಶುದ್ದೀನ್ ಅವರನ್ನು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಲಾಗಿದೆ.
0 comments:
Post a Comment