ಡಿಸಿಇಟಿಗೆ ಆನ್ ಲೈನ್ ಪರೀಕ್ಷೆ ಇಲ್ಲ, ಜೂನ್ 22 ರಂದು ಆಫ್‍ಲೈನ್ ಪರೀಕ್ಷೆ, ಪರೀಕ್ಷಾ ಕೇಂದ್ರಗಳ ಬಗ್ಗೆ ಸ್ಪಷ್ಟಪಡಿಸಿಕೊಳ್ಳಿ : ಅಭ್ಯರ್ಥಿಗಳಿಗೆ ಕೆಇಎ ಸೂಚನೆ - Karavali Times ಡಿಸಿಇಟಿಗೆ ಆನ್ ಲೈನ್ ಪರೀಕ್ಷೆ ಇಲ್ಲ, ಜೂನ್ 22 ರಂದು ಆಫ್‍ಲೈನ್ ಪರೀಕ್ಷೆ, ಪರೀಕ್ಷಾ ಕೇಂದ್ರಗಳ ಬಗ್ಗೆ ಸ್ಪಷ್ಟಪಡಿಸಿಕೊಳ್ಳಿ : ಅಭ್ಯರ್ಥಿಗಳಿಗೆ ಕೆಇಎ ಸೂಚನೆ - Karavali Times

728x90

22 May 2024

ಡಿಸಿಇಟಿಗೆ ಆನ್ ಲೈನ್ ಪರೀಕ್ಷೆ ಇಲ್ಲ, ಜೂನ್ 22 ರಂದು ಆಫ್‍ಲೈನ್ ಪರೀಕ್ಷೆ, ಪರೀಕ್ಷಾ ಕೇಂದ್ರಗಳ ಬಗ್ಗೆ ಸ್ಪಷ್ಟಪಡಿಸಿಕೊಳ್ಳಿ : ಅಭ್ಯರ್ಥಿಗಳಿಗೆ ಕೆಇಎ ಸೂಚನೆ

ಬೆಂಗಳೂರು, ಮೇ 22, 2024 (ಕರಾವಳಿ ಟೈಮ್ಸ್) : ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್ ಕೋರ್ಸ್‍ಗಳಿಗೆ ಪ್ರವೇಶಕ್ಕೆ ಜೂ. 22 ರಂದು ನಿಗದಿಯಾಗಿರುವ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ-2024 (ಡಿಸಿಇಟಿ-2024) ಆನ್‍ಲೈನ್ ಬದಲು  ಈ ಹಿಂದಿನಂತೆಯೇ ಆಫ್ ಲೈನ್ ಮಾದರಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.

ಡಿಸಿಇಟಿ-2024 ಪರೀಕ್ಷೆಯನ್ನು ಆನ್ ಲೈನ್ ಮೂಲಕ ನಡೆಸಲಾಗುವುದೆಂದು ಈ ಹಿಂದೆ ಅಧಿಸೂಚನೆ ಹೊರಡಿಸಿ ತಿಳಿಸಲಾಗಿತ್ತು. ಆದರೆ ಇದೀಗ ಕೆಲವೊಂದು ಕಾರಣಗಳಿಂದಾಗಿ ಪರೀಕ್ಷೆಯನ್ನು ಆನ್ ಲೈನ್ ನಡೆಸಲು ಸಾಧ್ಯವಾಗದೆ ಇದ್ದು, ಈ ಹಿಂದಿನಂತೆ ಆಫ್ ಲೈನ್ ಮಾದರಿಯಲ್ಲೇ ಓಎಂಆರ್ ಉತ್ತರ ಪತ್ರಿಕೆಗಳ ಮೂಲಕ ನಡೆಸಲಾಗುವುದು ಎಂದು ಕೆಇಎ ತಿಳಿಸಿದೆ. 

ಅಲ್ಲದೆ ಆಫ್ ಲೈನ್ ಪರೀಕ್ಷೆಯನ್ನು ಬಾಗಲಕೋಟೆ, ಬಳ್ಳಾರಿ, ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರ್ಗಿ, ಉಡುಪಿ, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಾತ್ರ ನಡೆಸಲಾಗುವುದು. ಡಿಸಿಇಟಿ-2024ಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಈ ಮೇಲಿನ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳನ್ನು ಪರೀಕ್ಷಾ ಸ್ಥಳವನ್ನಾಗಿ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಈ ಮೇಲಿನ ಜಿಲ್ಲೆಗಳಲ್ಲಿ ಒಂದನ್ನು ಆಯ್ಕೆ ಮಾಡಿ ಡಿಸಿಇಟಿ-2024 ಪರೀಕ್ಷೆಗೆ ಹಾಜರಾಗಬೇಕು ಎಂದು ಅವರು ಸೂಚಿಸಲಾಗಿದೆ. 

ಈ ಮೇಲಿನ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳನ್ನು ಪರೀಕ್ಷಾ ಸ್ಥಳವನ್ನಾಗಿ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಮೇ 24 ರ ಬೆಳಿಗ್ಗೆ 11 ಗಂಟೆಯಿಂದ ಮೇ 27 ರ ರಾತ್ರಿ 11.59ರೊಳಗೆ ಪ್ರಾಧಿಕಾರದ ವೆಬ್‍ಸೈಟಿನಲ್ಲಿ ನಿಗದಿತ ಲಿಂಕ್ ಬಳಸಿ ಬದಲಿ ಪರೀಕ್ಷಾ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಮೇಲೆ ತಿಳಿಸಿರುವ ಜಿಲ್ಲೆಗಳ ಪೈಕಿ ಯಾವುದಾದರೂ ಒಂದು ಜಿಲ್ಲೆಯನ್ನು ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ಪರೀಕ್ಷಾ ಕೇಂದ್ರದ ಜಿಲ್ಲೆಯನ್ನು ಆಯ್ಕೆ ಮಾಡುವ ಅಗತ್ಯ ಇರುವುದಿಲ್ಲ ಎಂದು ಅಭ್ಯರ್ಥಿಗಳಿಗೆ ಕೆಇಎ ಪ್ರಕಟಣೆ ಮೂಲಕ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಡಿಸಿಇಟಿಗೆ ಆನ್ ಲೈನ್ ಪರೀಕ್ಷೆ ಇಲ್ಲ, ಜೂನ್ 22 ರಂದು ಆಫ್‍ಲೈನ್ ಪರೀಕ್ಷೆ, ಪರೀಕ್ಷಾ ಕೇಂದ್ರಗಳ ಬಗ್ಗೆ ಸ್ಪಷ್ಟಪಡಿಸಿಕೊಳ್ಳಿ : ಅಭ್ಯರ್ಥಿಗಳಿಗೆ ಕೆಇಎ ಸೂಚನೆ Rating: 5 Reviewed By: karavali Times
Scroll to Top